ಮನೆ ಕಾನೂನು ಪತ್ನಿ ಆತ್ಮಹತ್ಯೆ: ಪತಿಗೆ 10 ವರ್ಷ ಜೈಲು

ಪತ್ನಿ ಆತ್ಮಹತ್ಯೆ: ಪತಿಗೆ 10 ವರ್ಷ ಜೈಲು

0

ಬಸವಕಲ್ಯಾಣ: ತಾಲ್ಲೂಕಿನ ಸಸ್ತಾಪುರದ ಶಾಂತಮ್ಮ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಪತಿ ಮೋಹನ ಕಂದಗೂಳಗೆ ಇಲ್ಲಿನ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ.

ಮೋಹನ ಕಂದಗೂಳ ಸಸ್ತಾಪುರದ ಪೊಲೀಸ್ ವಸತಿ ಗೃಹದಲ್ಲಿ ಸಹೋದರಿಯೊಂದಿಗೆ ವಾಸವಿದ್ದಾಗ 2017ರ ಸೆಪ್ಟೆಂಬರ್ 3 ರಂದು ಘಟನೆ ನಡೆದಿದೆ.

ಆತ್ಮಹತ್ಯೆಗೆ ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಮೃತರ ತಾಯಿ ನೀಲಮ್ಮ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಈ ಸಂಬಂಧ ಆಗಿನ ಸಿಪಿಐ ಅಲಿಸಾಬ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರ ಚನ್ನಬಸಪ್ಪ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ದೂರುದಾರರ ಪರವಾಗಿ ಸರ್ಕಾರಿ ಅಭಿಯೋಜಕ ಬಸವಂತರೆಡ್ಡಿ ವಾದ ಮಂಡಿಸಿದ್ದರು.