ಬಳ್ಳಾರಿ: ಪತ್ನಿಯ ಸಾವಿನಿಂದ ಮನನೊಂದಿದ್ದ ಪತಿ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ.
ಯೆಂಕಪ್ಪ ಈಡಿಗೇರ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ 5 ವರ್ಷದ ಮಗ ವಿಜಯ್ನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸೆ. 14 ರಂದು ಜಮೀನಿಗೆ ತೆರಳುವ ವೇಳೆ ಆಟೋ ಕಾಲುವೆಗೆ ಮಗುಚಿ ಬಿದ್ದ ಪರಿಣಾಮ ಯಂಕಪ್ಪ ಈಡಿಗೇರ್ ಪತ್ನಿ ಹುಲಿಗೆಮ್ಮ ಸಾವಿಗೀಡಾಗಿದ್ದರು. ಪತ್ನಿ ಸಾವಿನಿಂದ ಮನನೊಂದಿದ್ದ ಈತ ಇನ್ನೊಬ್ಬ ಮಗ ಆಟವಾಡಲು ಹೊರಗೆ ಹೋಗಿದ್ದ ವೇಳೆ ಸಣ್ಣ ಮಗ (ವಿಜಯ್)ನನ್ನು ಕೊಂದು ಸಾವಿಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಮ್ಸ್’ಗೆ ಕಳುಹಿಸಲಾಗಿದೆ.














