ಚೆನ್ನೈ: ವಿಶ್ವಗುರುವಿನ ಪರಿಕಲ್ಪನೆಯಲ್ಲಿ, ಗಡಿ ಸಮಸ್ಯೆಗಳ ಬಗ್ಗೆ ಚೀನಾಕ್ಕೆ ಮಿಲಿಟರಿ ಪ್ರತಿಕ್ರಿಯೆ ನೀಡಿದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ವಿಶ್ವಗುರುವಾಗಲು ಬುದ್ಧಿವಂತಿಕೆ ಅಗತ್ಯ ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಚೆನ್ನೈನ ಥಿಂಕ್ ಎಡು ಕಾನ್’ಕ್ಲೇವ್’ನಲ್ಲಿಲ್ಲಿ ‘ದಿ ಗ್ಲೋಬಲ್ ಹೈ ಟೇಬಲ್: ಕ್ಯಾನ್ ಇಂಡಿಯಾ ಬಿ ಎ ವಿಶ್ವಗುರು’ ಎಂಬ ವಿಷಯ ಕುರಿತು ಮಾತನಾಡಿದ ಅವರು, ಹಿಂದುತ್ವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಶೂನ್ಯ. ಮೋದಿ ಅವರು ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.
ಸುಪ್ರೀಂ ಕೋರ್ಟ್’ನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವಾಗ ಅವರು ತಮ್ಮ ಸ್ನೇಹಿತ ಎಸ್ ಗುರುಮೂರ್ತಿ ಅವರನ್ನು ಅರ್ಜಿ ಸಲ್ಲಿಸಲು ಕರೆದೊಯ್ದಿದ್ದರು. ಮಂದಿರ ನಿರ್ಮಾಣಕ್ಕೆ ಮಂಜೂರಾದ ಭೂಮಿಯನ್ನು ವಾಪಸ್ ಕೊಡಬೇಕೆಂದು ಪ್ರಧಾನಿ ಮೋದಿ ಬಯಸಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು. ಮಾಜಿ ಪ್ರಧಾನಿ ನರಸಿಂಹರಾವ್ ಅವರ ಅಧಿಕಾರಾವಧಿಯಲ್ಲಿ ಭೂಮಿಯನ್ನು ರಾಷ್ಟ್ರೀಕರಣಗೊಳಿಸಲಾಯಿತು ಎಂದರು.
ಮೋದಿಯವರೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿಲ್ಲ ಎಂದು ಹೇಳಿದ ಸ್ವಾಮಿ, ಚೀನಾ ಮತ್ತು ಆರ್ಥಿಕ ನೀತಿಗಳ ಕುರಿತಾದ ಪ್ರಧಾನಿಯವರ ನೀತಿಗಳನ್ನು ವಿರೋಧಿಸುವುದಾಗಿ ಹೇಳಿದರು.
ಗುರುಗಳು, ಸಾಧುಗಳು ಮತ್ತು ಸನ್ಯಾಸಿಗಳು ಆರು ವಿಭಿನ್ನ ರೀತಿಯ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ. ಅವುಗಳೆಂದರೆ ಅರಿವು, ಭಾವನಾತ್ಮಕ, ಸಾಮಾಜಿಕ, ನೈತಿಕ, ಪರಿಸರ ಮತ್ತು ಆದ್ಯಾತ್ಮಿಕತೆಯಾಗಿರುತ್ತದೆ. ಆಧುನಿಕ ತಂತ್ರಜ್ಞಾನಗಳನ್ನು ರೂಪಿಸುವ ಶತಮಾನಗಳ ಮೊದಲು ಭಾರತ ಇತರ ದೇಶಗಳಿಗಿಂತ ಮುಂದಿತ್ತು ಎಂದು ಸ್ವಾಮಿ ಹೇಳಿದರು.
ನಾವು ಇಡೀ ಜಗತ್ತನ್ನು ಆಕರ್ಷಿಸಲು ಸಾಧ್ಯವಿದೆ ಮತ್ತು ನಮ್ಮಂತಹ ದೊಡ್ಡ ದೇಶವು ವಿಶ್ವಗುರುವಾಗುವುದು ನಮ್ಮ ವ್ಯಾಪ್ತಿಯಲ್ಲಿರುವ ವಿಷಯ ಎಂದಿದ್ದಾರೆ.