ಭುವನೇಶ್ವರ: ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಬೆನ್ನಟ್ಟಿ, ಕತ್ತಿ ತೋರಿಸಿ ಹೆದರಿಸಿದ ಆರೋಪದ ಮೇಲೆ ಮೂವರು ಟ್ಯಾಕ್ಸಿ ಚಾಲಕರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಭುವನೇಶ್ವರದ ವಿವಿಧ ಪ್ರದೇಶಗಳಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಪ್ರತೀಕ್ ಸಿಂಗ್ ತಿಳಿಸಿದ್ದಾರೆ.
ಭುವನೇಶ್ವರದ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುಭಾಶ್ರೀ ನಾಯಕ್ ಅವರು ಜನವರಿ 2ರಂದು ಸೈನ್ಸ್ ಪಾರ್ಕ್ ಪ್ರದೇಶದ ಬಳಿ ರಾತ್ರಿ ಕರ್ತವ್ಯ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಎಸ್ ಯುವಿಯಲ್ಲಿ ಬಂದ ಮೂವರ ತಂಡವು ಬೆನ್ನಟ್ಟಿ ಅಟ್ಟಾಡಿಸಿ ನಿಂದಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆಕೆ ಮಾರ್ಗವನ್ನು ತಿರುಗಿಸಿ ಪೊಲೀಸ್ ರಿಸರ್ವ್ ಗ್ರೌಂಡ್ ಬಳಿ ತಲುಪುತ್ತಿದ್ದಂತೆ ಅವರು ಅವಳನ್ನು ಹಿಂಬಾಲಿಸಿದರು. ಅಲ್ಲಿ ಮೂವರಲ್ಲಿ ಒಬ್ಬಾತ ಕತ್ತಿ ತೆಗೆದು ಕೊಲೆ ಬೆದರಿಕೆ ಹಾಕಿದ್ದಾನೆ.
ಬುಧವಾರ ವಾಹನವನ್ನು ಗುರುತಿಸಲಾಗಿತ್ತು, ಮೂವರನ್ನು ಗುರುವಾರ ಬಂಧಿಸಲಾಯಿತು ಎಂದು ಸಿಂಗ್ ಹೇಳಿದರು.