ಮನೆ ರಾಷ್ಟ್ರೀಯ ಆತ್ಮಹತ್ಯೆ ಮಾಡಿಕೊಳ್ಳಲು 13ನೇ ಮಹಡಿಯಿಂದ ಜಿಗಿದರೂ ಬದುಕುಳಿದ ಕಾರ್ಮಿಕ

ಆತ್ಮಹತ್ಯೆ ಮಾಡಿಕೊಳ್ಳಲು 13ನೇ ಮಹಡಿಯಿಂದ ಜಿಗಿದರೂ ಬದುಕುಳಿದ ಕಾರ್ಮಿಕ

0

ಆಯುಷ್ಯ ಗಟ್ಟಿ ಇದ್ದರೆ ಎಂಥ ಅವಘಡ ಸಂಭವಿಸಿದರೂ ಪಾರಾಗಿ ಬರುತ್ತಾರೆ ಎಂಬುದಕ್ಕೆ ಈ ವಿಡಿಯೋ ಪ್ರತ್ಯಕ್ಷ  ಉದಾಹರಣೆ, ಹೌದು ಇಲ್ಲೊಬ್ಬ ಕಾರ್ಮಿಕ ತಾನು ಕೆಲಸ ಮಾಡುವ ಕಟ್ಟಡದ ಹದಿಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯಗೆ ಯತ್ನಿಸಿದ್ದಾನೆ ಆದರೆ ಆತನ ಆಯುಷ್ಯ ಗಟ್ಟಿ ಇದ್ದ ಕಾರಣ ಆತ ಎಂಟನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದಾನೆ ಇದಾದ ಬಳಿಕ ಮತ್ತೆ ಎಂಟನೇ ಮಹಡಿಯಿಂದ ಜಿಗಿದಿದ್ದಾನೆ ಆದರೂ ಆತ ಬದುಕುಳಿದಿದ್ದಾನೆ.

Join Our Whatsapp Group

ಘಟನೆಗೆ ಸಂಬಂಧಿಸಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಅಂದಹಾಗೆ ಈ ಘಟನೆ ನಡೆದಿರುವುದು ವಿಕ್ರೋಲಿಯ ಕನ್ನಂವಾರ್ ಪಟ್ಟಣದಲ್ಲಿ. ಇಲ್ಲಿನ ನಿರ್ಮಾಣ ಹಂತದಲ್ಲಿರುವ ಹದಿಮೂರು ಅಂತಸ್ಥಿತ ಕಟ್ಟಡದ ಮೇಲೆ ಕಾರ್ಮಿಕನೋರ್ವ ನಿಂತು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕೆಳಗೆ ಜಿಗಿದಿದ್ದಾನೆ ಆದರೆ ಕಟ್ಟಡದ ಎಂಟನೇ ಮಹಡಿಯಲ್ಲಿ ಕಟ್ಟಿರುವ ಸುರಕ್ಷತಾ ಜಾಲದಲ್ಲಿ(ಬಲೆ) ಸಿಕ್ಕಿಬೀಳುತ್ತಾನೆ ಈ ವೇಳೆ ಬಲೆಯನು ಹಿಡಿದುಕೊಂಡು ನೇತಾಡುತ್ತಿರುವ ವ್ಯಕ್ತಿ ಅಲ್ಲಿಂದ ಮತ್ತೆ ಕೆಳಗೆ ಜಿಗಿಯುತ್ತಾನೆ ಆದರೆ ಆತನ ಆಯುಷ್ಯ ಗಟ್ಟಿಯಾಗಿದ್ದ ಪರಿಣಾಮ ಕಟ್ಟಡ ಮೊದಲ ಮಹಡಿಯಲ್ಲಿ ಕಟ್ಟಿದ್ದ ಸುರಕ್ಷಿತ ಜಾಲದಲ್ಲಿ(ಬಲೆ) ಸಿಕ್ಕಿಹಾಕಿಕೊಂಡು ಬದುಕಿದ್ದಾನೆ.

ಅದಕ್ಕೆ ಹೇಳೋದು ಆಯುಷ್ಯ ಗಟ್ಟಿ ಇದ್ದರೆ ಎಂಥ ಅವಘಡ ಸಂಭವಿಸಿದರೂ ಬದುಕಿ ಬರುತ್ತಾರೆ ಅದೇ ಆಯಸ್ಸು ಮುಗಿದಿದ್ದರೆ ಕಟ್ಟಡದಿಂದ ಹರಬೇಕಾಗಿಲ್ಲ ಕೂತಲ್ಲೇ ಸಾವು ಹುಡುಕಿಕೊಂಡು ಬರುತ್ತದೆ.