ಮನೆ ಕ್ರೀಡೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ 2023: ಓವಲ್ ಮೈದಾನದಲ್ಲಿ ವೇಗಿಗಳದ್ದೇ ದರ್ಬಾರ್

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ 2023: ಓವಲ್ ಮೈದಾನದಲ್ಲಿ ವೇಗಿಗಳದ್ದೇ ದರ್ಬಾರ್

0

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಆತಿಥ್ಯವಹಿಸಲು ಲಂಡನ್‌ ನ ಓವಲ್ ಮೈದಾನ ಸಜ್ಜಾಗಿದೆ. ವಿಸ್ಮಯಕಾರಿ ಸಂಗತಿ ಎಂದರೆ ಈ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆಯೂ ಉತ್ತಮವಾಗಿಲ್ಲ ಅಥವಾ ಆಸ್ಟ್ರೇಲಿಯಾದ ದಾಖಲೆಯೂ ಉತ್ತಮವಾಗಿಲ್ಲ. ಅಲ್ಲದೆ ಈ ಮೈದಾನ ಸ್ಪಿನ್ನರ್​ ಗಳಿಗಿಂತ ವೇಗಗಳಿಗೆ ಹೆಚ್ಚು ನೆರವಾಗಿದೆ.

Join Our Whatsapp Group

ಭಾರತ ಮತ್ತು ಆಸ್ಟ್ರೇಲಿಯಾ ತಂಡದಲ್ಲಿ ವೇಗದ ಬೌಲಿಂಗ್ ವಿಭಾಗ ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದೆ. ಉಭಯ ತಂಡದಲ್ಲೂ ಅನುಭವಿ ವೇಗದ ಬೌಲರ್ ​ಗಳ ದಂಡೆ ಇದೆ. ಇನ್ನು ಈ ಮೈದಾನದಲ್ಲಿ ಎರಡೂ ತಂಡದ ವೇಗದ ಬೌಲರ್​ ಗಳ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ..

ಈ ಮೈದಾನದಲ್ಲಿ ಎರಡೂ ತಂಡಗಳ ಬೌಲಿಂಗ್ ದಾಖಲೆಯನ್ನು ನೋಡುವುದಾದರೆ. ಇಲ್ಲಿ ಭಾರತದ ಬೌಲಿಂಗ್ ವಿಭಾಗವೇ ಮೇಲುಗೈ ಸಾಧಿಸಿದ್ದಾರೆ. ಲಂಡನ್‌ ನ ಓವಲ್ ಮೈದಾನದಲ್ಲಿ ಪ್ರಸ್ತುತ ಭಾರತದ ಬೌಲರ್‌ಗಳು ಒಟ್ಟು 27 ವಿಕೆಟ್‌ ಗಳನ್ನು ಕಬಳಿಸಿದ್ದರೆ, ಆಸ್ಟ್ರೇಲಿಯಾದ ಬೌಲರ್​ ಗಳು 20 ವಿಕೆಟ್‌ ಗಳನ್ನು ಪಡೆದಿದ್ದಾರೆ.

ಇನ್ನು ಎರಡೂ ತಂಡಗಳ ಈಗಿನ ವೇಗದ ಬೌಲರ್‌ ಗಳ ವಿಚಾರಕ್ಕೆ ಬಂದರೆ, ಭಾರತದ ವೇಗಿಗಳು 12 ವಿಕೆಟ್ ಉರುಳಿಸಿದ್ದರೆ, ಆಸ್ಟ್ರೇಲಿಯಾದ ವೇಗಿಗಳು 10 ವಿಕೆಟ್ ಪಡೆದಿದ್ದಾರೆ.

ಪ್ರಸ್ತುತ ಟೀಂ ಇಂಡಿಯಾದ ವೇಗದ ದಾಳಿಯ ಜವಬ್ದಾರಿ ಹೊತ್ತುಕೊಂಡಿರುವ ಉಮೇಶ್, ಶಾರ್ದೂಲ್, ಶಮಿ ಹಾಗೂ ಸಿರಾಜ್ ಈ ಮೊದಲು ಈ ಮೈದಾನದಲ್ಲಿ ಆಡಿದ್ದಾರೆ. ಅದರಲ್ಲಿ ಉಮೇಶ್ ಯಾದವ್ ಟೀಂ ಇಂಡಿಯಾ ಪರ ಗರಿಷ್ಠ 6 ವಿಕೆಟ್ ಪಡೆದಿದ್ದಾರೆ. ಇವರಲ್ಲದೆ ಶಾರ್ದೂಲ್ ಠಾಕೂರ್ 3 ವಿಕೆಟ್, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದಾರೆ.

ಮತ್ತೊಂದೆಡೆ, ಆಸ್ಟ್ರೇಲಿಯಾದ ಬಗ್ಗೆ ಮಾತನಾಡುವುದಾದರೆ, ನಾಯಕ ಪ್ಯಾಟ್ ಕಮಿನ್ಸ್ ಗರಿಷ್ಠ 5 ವಿಕೆಟ್ ಪಡೆದಿದ್ದಾರೆ. ಇವರನ್ನು ಹೊರತುಪಡಿಸಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಹಾಗೂ ಜೋಶ್ ಹೇಜಲ್ ವುಡ್ 2 ವಿಕೆಟ್ ಪಡೆದಿದ್ದಾರೆ.