ಮನೆ ರಾಜ್ಯ ಯಗಚಿ ಜಲಾಶಯ ಭರ್ತಿ: 500 ಕ್ಯೂಸೆಕ್ ನೀರು ನದಿಗೆ

ಯಗಚಿ ಜಲಾಶಯ ಭರ್ತಿ: 500 ಕ್ಯೂಸೆಕ್ ನೀರು ನದಿಗೆ

0

ಹಾಸನ (Hassan)-ಮಳೆಯಿಂದಾಗಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಯಗಚಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ 500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತದೆ.

ನೀರಿನ ಒಳ ಹರಿವು ಹೆಚ್ಚಾದ್ದರಿಂ ಹಾಗೂ ಜಲಾಶಯ ಭರ್ತಿಯಾಗಿದ್ದರಿಂದ 5 ಕ್ರಸ್ಟ್ ಗೇಟ್‍ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.

3164.900 ಅಡಿ ಗರಿಷ್ಟ ಸಂಗ್ರಹ ಸಾಮರ್ಥ್ಯದ ‘ಯಗಚಿ’ ಜಲಾಶಯದಲ್ಲಿ 3164.06 ಅಡಿ ನೀರು ಸಂಗ್ರಹವಾಗಿರುವುದರಿಂದ ಅಣೆಕಟ್ಟೆನಿಂದ ನೀರು ಹೊರ ಬಿಡಲಾಗುತ್ತಿದೆ. ನದಿಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಇನ್ನೊಂದೆಡೆ ಮಳೆಯ ನಡುವೆಯೂ ಯಗಚಿ ಜಲಾಶಯಕ್ಕೆ ಭೇಟಿ ನೀಡಿ ನೀರು ಹರಿಯುತ್ತಿರುವುದನ್ನು ನೋಡಿ ಫೋಟೋ ಕ್ಲಿಕ್ಕಿಸಿಕೊಂಡು ಆನಂದಿಸುತ್ತಿದ್ದಾರೆ. ಇನ್ನು ಹಾಸನದಲ್ಲಿ ಮಳೆ ಇಂದು ಕೊಂಚ ಕಡಿಮೆಯಾಗಿದ್ದರೂ, ಮಳೆಯಿಂದಾದ ಅವಾಂತರ ಮಾತ್ರ ಮುಂದುವರಿದಿದೆ.

ನಿರಂತರ ಮಳೆಯಿಂದಾಗಿ ಅರಕಲಗೂಡು ತಾಲೂಕಿನ ಹೆಬ್ಬಾಲೆ ಕೊಪ್ಪಲು ಗ್ರಾಮದ ಸುರೇಶ್ ಅವರ ಮನೆ ಕುಸಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸ್ಥಳಕ್ಕೆ ಹೆಬ್ಬಾಲೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಹರೀಶ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರದ ಜೊತೆಗೆ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಹಿಂದಿನ ಲೇಖನʻನಡೆದಾಡುವ ದೇವರೆಂದೇ ಖ್ಯಾತಿʼಗಳಿಸಿದ್ದ ಬಸವ ನಿಧನ  
ಮುಂದಿನ ಲೇಖನರೈಲ್ವೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚನೆ: ಪ್ರಶ್ನಿಸಿದ್ದಕ್ಕೆ 14 ಪೌರ ಕಾರ್ಮಿಕರು ವಜಾ