ಮನೆ ರಾಷ್ಟ್ರೀಯ ದ.ಆಫ್ರಿಕಾ, ನಮೀಬಿಯಾದಿಂದ ಭಾರತಕ್ಕೆ ಸ್ಥಳಾಂತರಿಸಿದ್ದ ಚೀತಾ ಮರಿ ಸಾವು

ದ.ಆಫ್ರಿಕಾ, ನಮೀಬಿಯಾದಿಂದ ಭಾರತಕ್ಕೆ ಸ್ಥಳಾಂತರಿಸಿದ್ದ ಚೀತಾ ಮರಿ ಸಾವು

0

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ತಿಂಗಳ ಚೀತಾ ಮರಿ ಮಂಗಳವಾರ ಸಾವನ್ನಪ್ಪಿದೆ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.

Join Our Whatsapp Group

ಜ್ವಾಲಾ ಎಂಬ ಹೆಣ್ಣು ಚೀತಾಗೆ ಜನಿಸಿದ ನಾಲ್ಕು ಮರಿಗಳಲ್ಲಿ ಒಂದು ಮರಿ ಸಾವನ್ನಪ್ಪಿದೆ. ಇದು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಭಾರತಕ್ಕೆ ಸ್ಥಳಾಂತರಗೊಂಡ 20 ಚೀತಾಗಳಲ್ಲಿ ಒಂದಾಗಿದೆ.

ಮರಿಯ ಸಾವಿನೊಂದಿಗೆ ಉದ್ಯಾನವನದಲ್ಲಿ ಎರಡು ತಿಂಗಳೊಳಗೆ ನಾಲ್ಕು ಚೀತಾಗಳು ಸಾವನ್ನಪ್ಪಿವೆ. ಮೊದಲ ಚೀತಾ ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು. ಎರಡನೇ ಚೀತಾ ಉದಯ್ ಏಪ್ರಿಲ್ 24 ರಂದು ಕಾರ್ಡಿಯೋ-ಪಲ್ಮನರಿ ವೈಫಲ್ಯದಿಂದ ಸಾವನ್ನಪ್ಪಿತು. ಮೂರನೇ ಚೀತಾ ದಕ್ಷ ಮೇ 9 ರಂದು ಸಂಯೋಗದ ಪ್ರಯತ್ನದಲ್ಲಿ ಸಾವನ್ನಪ್ಪಿತು.

ಹಿಂದಿನ ಲೇಖನಬ್ಯಾಸ್ಕೆಟ್ ಬಾಲ್ ಒಕ್ಕೂಟದ ಆಡಳಿತಾಧಿಕಾರಿ ಆಗದಂತೆ ಬೌನ್ಸರ್ ಗಳು ತಡೆ: ದೆಹಲಿ ಹೈಕೋರ್ಟ್ ಗೆ ನ್ಯಾ. ಕೃಷ್ಣಭಟ್ ದೂರು
ಮುಂದಿನ ಲೇಖನಬಾಲಿವುಡ್​: ಒಂದೇ ದಿನ ಇಹಲೋಕ ತ್ಯಜಿಸಿದ ಖ್ಯಾತ ನಟ-ನಟಿ