ಬೆಂಗಳೂರು: 2022ರ ಜುಲೈನಲ್ಲಿ ಯಾವ ನಟರು ಹೆಚ್ಚು ಜನಪ್ರಿಯವಾಗಿದ್ದರು ಎನ್ನುವ ಪಟ್ಟಿ ಹೊರ ಬಿದ್ದಿದೆ. ಓರ್ಮಾಕ್ಸ್ ಸಮೀಕ್ಷೆ ಪ್ರಕಾರ ಭಾರತದ ಟಾಪ್ 10 ನಟರ ಪಟ್ಟಿಯಲ್ಲಿ ನಟ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ರಾಕಿಂಗ್ ಸ್ಟಾರ್ ಯಶ್ ಕೂಡ ಸ್ಥಾನ ಪಡೆದಿದ್ದಾರೆ.
ಬಾಹುಬಲಿ ಸ್ಟಾರ್ ಪ್ರಭಾಸ್ ಅವರು ಟಾಪ್ 10 ಲಿಸ್ಟ್ನಲ್ಲಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಟ ಜೂನಿಯರ್ ಎನ್ಟಿಆರ್ ಮೂರನೇ ಸ್ಥಾನದಲ್ಲಿದ್ದಾರೆ. ಈ ನಟರು ಕಡಿಮೆ ಸಿನಿಮಾಗಳನ್ನು ಕೊಟ್ಟಿದ್ದರೂ ಕೂಡ ಜನಪ್ರಿಯತೆಯ ವಿಚಾರದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪುಷ್ಪ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ ಅಲ್ಲು ಅರ್ಜುನ್ ಇದ್ದಾರೆ.
‘ಕೆಜಿಎಫ್ 2’ ಮೂಲಕ ಹವಾ ಸೃಷ್ಟಿಸಿದ ಯಶ್ 5ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ನಟರ ಪಟ್ಟಿಯಲ್ಲಿ ಯಶ್ 5ನೇ ಸ್ಥಾನ ಪಡೆದಿದ್ದಾರೆ. ಕನ್ನಡದ ನಟರ ಪೈಕಿ ನಟ ಯಶ್ ಒಬ್ಬರೇ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಟ ರಾಮ್ ಚರಣ್ 6ನೇ ಸ್ಥಾನದಲ್ಲಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ 7ನೇ ಸ್ಥಾನದಲ್ಲಿ, ಟಾಲಿವುಡ್ ನಟ ಮಹೇಶ್ ಬಾಬು ಅವರು 8ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ತಮಿಳು ನಟ ಸೂರ್ಯ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಸೂರರೈ ಪೊಟ್ರು, ಜೈ ಭೀಮ್ನಂತಹ ಸಿನಿಮಾಗಳನ್ನು ಮಾಡಿದ ಸೂರ್ಯ ರಾಲೆಕ್ಸ್ ಆಗಿಯೂ ವಿಕ್ರಮ್ ಸಿನಿಮಾದಲ್ಲಿ ಮಿಂಚಿದ್ದಾರೆ. ತಮಿಳು ಅಜಿತ್ ಕುಮಾರ್ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಈ ಬಾರಿ ಟಾಪ್ 10 ನಟರ ಲಿಸ್ಟ್ನಲ್ಲಿ ಸೌತ್ ನಟರೆ ಮಿಂಚಿದ್ದಾರೆ. ಸೌತ್ ಇಂಡಿಯಾದ ಬಹುತೇಕ ಸ್ಟಾರ್ ನಟರ ಹೆಸರು ಈ ಲಿಸ್ಟ್‌ನಲ್ಲಿದೆ. ಆದರೆ ಬಾಲಿವುಡ್ ನಟರ ಸುದ್ದಿಯೇ ಇಲ್ಲ. ಅಕ್ಷಯ್ ಕುಮಾರ್ ಈ ಲಿಸ್ಟ್ಸೇರಿಕೊಂಡ ಬಾಲಿವುಡ್ನ ಏಕೈಕ ನಟ. ಅಕ್ಷಯ್ ಕುಮಾರ್‌ಗೆ 7ನೇ ಸ್ಥಾನ ಸಿಕ್ಕಿದೆ.














