ಮನೆ ಅಪರಾಧ ಶಿವಮೊಗ್ಗದಲ್ಲಿ ಫ್ಲೆಕ್ಸ್ ತೆರವು ವಿವಾದ: ಗುರುವಾರದವರೆಗೆ 144 ಸೆಕ್ಷನ್ ಜಾರಿ

ಶಿವಮೊಗ್ಗದಲ್ಲಿ ಫ್ಲೆಕ್ಸ್ ತೆರವು ವಿವಾದ: ಗುರುವಾರದವರೆಗೆ 144 ಸೆಕ್ಷನ್ ಜಾರಿ

0

ಶಿವಮೊಗ್ಗ(Shivamogga): ವೀರ ಸಾವರ್ಕರ್​ ಫ್ಲೆಕ್ಸ್ ತೆಗೆದ ವಿಚಾರ ಸಂಬಂಧ ನಗರದಲ್ಲಿ 144 ಸೆಕ್ಷನ್ ಗುರುವಾರದ ತನಕ ಮುಂದುವರೆಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಅಮೀರ್ ಅಹಮದ್ ವೃತ್ತದಲ್ಲಿ ನಡೆದ ಘಟನೆಯಿಂದ ಬಿಗುವಿನ ವಾತಾವರಣ ಉಂಟಾಗಿದ್ದು, ಸೋಮವಾರ ಮಧ್ಯಾಹ್ನದಿಂದಲೇ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ನಿಷೇಧಾಜ್ಞೆ ಜಾರಿ ಇರುವುದರಿಂದ 5 ಜನಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

ಜೊತೆಗೆ ಸಭೆ ಸಮಾರಂಭ, ಮೆರವಣಿಗೆ ಮತ್ತು ವಿಜಯೋತ್ಸವ ಹಾಗೂ ಇತರ ಸಾರ್ವಜನಿಕ ಕಾರ್ಯಕ್ರಮ ನಡೆಸುವಂತಿಲ್ಲ. ಯಾವುದೇ ಆಯುಧ, ಮಾರಕಾಸ್ತ್ರಗಳನ್ನು ಹಾಗೂ ಸ್ಫೋಟಕಗಳನ್ನು ತೆಗದುಕೊಂಡು ಹೋಗುವುದು ಹಾಗೂ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ವ್ಯಕ್ತಿ, ಶವಗಳ ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ, ಬಿತ್ತಿಚಿತ್ರಗಳನ್ನು ತೋರಿಸಲು ಅವಕಾಶವಿಲ್ಲ ಎಂದು ಆದೇಶಿಸಲಾಗಿದೆ.

ಬೈಕ್​ ಹಿಂಬದಿ ಸವಾರರಿಗೆ ನಿರ್ಬಂಧ: ದ್ವಿಚಕ್ರ ವಾಹನದಲ್ಲಿ 40 ವರ್ಷಕ್ಕಿಂತ ಕಿರಿಯವರು ಹಿಂಬದಿ ಸವಾರಿ ಮಾಡುವಂತಿಲ್ಲ: ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ, 40 ವರ್ಷ ಮೇಲ್ಪಟ್ಟ ಪುರುಷರಿಗೆ ನಿರ್ಬಂಧವಿಲ್ಲ. ಮಹಿಳೆಯರ ಸಂಚಾರಕ್ಕೂ ಯಾವುದೇ ನಿರ್ಬಂಧವಿಲ್ಲ. ಅನಿವಾರ್ಯ ಪರಿಸ್ಥಿತಿ ಹೊರತು ಪಡಿಸಿ ರಾತ್ರಿ 9 ರಿಂದ ಬೆಳಗ್ಗೆ 5 ರ ತನಕ ದ್ವಿಚಕ್ರ ವಾಹನ ಸಂಚಾರವನ್ನು ನಿಷೇಧಿಸಿದೆ.

ಹಿಂದಿನ ಲೇಖನಆ.22 ರಿಂದ 26ರವರೆಗೆ ವಾರ್ಷಿಕ ವಿಶೇಷ ಶಿಬಿರ
ಮುಂದಿನ ಲೇಖನಮೆಗ್ಗಾನ್ ಆಸ್ಪತ್ರೆಗೆ ಬಿ.ವೈ.ವಿಜಯೇಂದ್ರ ಭೇಟಿ: ಚಾಕು ಇರಿತಕ್ಕೊಳಗಾದ ಯುವಕನ ಆರೋಗ್ಯ ವಿಚಾರಣೆ