ಮೈಸೂರು: ಕುಂಭಮೇಳದ ವಿರುದ್ದ ಮಾತನಾಡುವವರು ಅಯೋಗ್ಯರು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಎಲ್ಲರಿಗೂ ಅವರ ನಂಬಿಕೆ ಪ್ರಕಾರ ಬದುಕುವ ಸ್ವಾತಂತ್ರ್ಯ ಇದೆ. ಕುಂಭಮೇಳದ ವಿರುದ್ದ ಮಾತನಾಡುವವರು ಅಯೋಗ್ಯರು ಎನ್ನುವವರೇ ಅಯೋಗ್ಯರು. ಹಿಂದೂ ಧರ್ಮದಲ್ಲಿ ಒಂದೇ ರೀತಿಯ ನಂಬಿಕೆ ಇದೆಯಾ? ಹಿಂದೂಧರ್ಮದಲ್ಲಿ ಹಲವು ರೀತಿಯ ನಂಬಿಕೆ ಇದೆ. ನಾಸ್ತಿಕರೂ ಕೂಡ ಹಿಂದೂ ದರ್ಮದಲ್ಲಿದ್ದಾರೆ ನಾಸ್ತಿಕರೆಲ್ಲಾ ಹಿಂದೂ ದರ್ಮದ ಬಗ್ಗೆ ಟೀಕೆ ಮಾಡುತ್ತಾರೆ ಎಂದರು.
ಕುಂಭಮೇಳದಲ್ಲಿ ಸ್ನಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಯಾರಿಗೆ ನಂಬಿಕೆ ಇರುತ್ತದೆ ಅವರು ಹೋಗಿ ಸ್ನಾನ ಮಾಡುತ್ತಾರೆ. ನಂಬಿಕೆ ಇಲ್ಲದವರು ಕುಂಭಮೇಕ್ಕೆ ಹೊಗಿ ಸ್ನಾನಮಾಡಲ್ಲ ಒಂದೇ ರೀತಿ ನಂಬಿಕೆ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ. ನನಗೆ ದೇವರ ಮೇಲೆ ಇದೆ ಎಂದರು.














