ಮನೆ ಸುದ್ದಿ ಜಾಲ ಮುಸ್ಲಿಂ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು: ಕೆ.ಎಸ್ ಈಶ್ವರಪ್ಪ ಆಗ್ರಹ

ಮುಸ್ಲಿಂ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು: ಕೆ.ಎಸ್ ಈಶ್ವರಪ್ಪ ಆಗ್ರಹ

0

ಶಿವಮೊಗ್ಗ:  ಹರ್ಷ ಹತ್ಯೆ ಪ್ರಕರಣ ಸಂಬಂಧ ಮುಸ್ಲಿಂ ಗೂಂಡಾಗಿರಿ ಮಿತಿಮಿರೀದೆ, ಮುಸ್ಲಿಂ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಮುಸ್ಲೀಂ ಗೂಂಡಾಗಳ ಬಗ್ಗೆ ಮುಸ್ಲಿಂ ಮುಖಂಡರು ಗಮನ ಹರಿಸಬೇಕು. ಹಿಂದೂ ಸಮುದಾಯ ಆಕ್ರೋಶಗೊಂಡರೆ ಹೇಗೆಂಬ ಭಯ ಶುರುವಾಗಿದೆ. ಅವರನ್ನ ನಿಯಂತ್ರಿಸುವುದು ಹೇಗೆ ಎಂಬ ಭಯವಿದೆ ಎಂದರು.

ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಹರ್ಷನ ಕೊಲೆ ಹಿಂದೆ ಯಾರಿದ್ದಾರೆಂದು ಪತ್ತೆ ಹಚ್ಚಲಾಗುತ್ತಿದೆ. ಯಾರು ಷಡ್ಯಂತ್ರ ನಡೆಸಿದ್ದಾರೆ ಎಂದು ತನಿಖೆಯ ನಂತರ ಬಯಲಾಗಲಿದೆ ಎಂದು  ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.