ಮನೆ ರಾಜ್ಯ ಯೋಗ ದಿನ:  ಹಿಂದಿನ ಜಿಲ್ಲಾಧಿಕಾರಿಗಳಾದ ರಣದೀಪ್, ಅಭಿರಾಮ್ ಜಿ ಶಂಕರ್ ಸ್ಮರಿಸಿದ ಸಂಸದ ಪ್ರತಾಪ್ ಸಿಂಹ

ಯೋಗ ದಿನ:  ಹಿಂದಿನ ಜಿಲ್ಲಾಧಿಕಾರಿಗಳಾದ ರಣದೀಪ್, ಅಭಿರಾಮ್ ಜಿ ಶಂಕರ್ ಸ್ಮರಿಸಿದ ಸಂಸದ ಪ್ರತಾಪ್ ಸಿಂಹ

0

ಮೈಸೂರು(Mysuru): 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಸಾಂಸ್ಕೃತಿಕ ನಗರಿ ಸಜ್ಜಾಗಿರುವ ಬೆನ್ನಲ್ಲೇ  ಸಂಸದ ಪ್ರತಾಪ್ ಸಿಂಹ ಹಿಂದಿನ ಜಿಲ್ಲಾಧಿಕಾರಿಗಳಾದ  ರಣದೀಪ್ ಹಾಗೂ ಅಭಿರಾಮ್ ಜಿ ಶಂಕರ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸದ ಪ್ರತಾಪ್ ಸಿಂಹ, 8 ನೇ ವಿಶ್ವ ಯೋಗ ದಿನಕ್ಕೆ ಪ್ರಧಾನಿ ಮೋದಿಜೀ ಅವರು ಆಗಮಿಸುತ್ತಿರುವ  ಈ ಸಂದರ್ಭದಲ್ಲಿ ಹಿಂದಿನ ಜಿಲ್ಲಾಧಿಕಾರಿಗಳಾದ ರಣದೀಪ್ ಮತ್ತು ಅಭಿರಾಮ್ ಶಂಕರ್ ಅವರ ಪರಿಶ್ರಮವನ್ನು ಧನ್ಯತೆಯಿಂದ ನೆನಪು ಮಾಡಿಕೊಳ್ಳೋಣ.  ಈ ಇಬ್ಬರಿಗೂ ಸಮಸ್ತ ಮೈಸೂರಿಗರ ಪರವಾಗಿ ವಂದಿಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರು ಜೂನ್ 20 ನೇ ತಾರಿಖಿನಂದೇ ಮೈಸೂರಿಗೆ ಆಗಮಿಸುತ್ತಿದ್ದಾರೆ .ಅಂತರರಾಷ್ಟ್ರೀಯ ಯೋಗ ದಿನ 2015 ರಲ್ಲಿ ಆರಂಭವಾದಗಿನಿಂದಲು ಮೈಸೂರಿಗರಾದ ನಾವು ಸಂಭ್ರಮದಿಂದ ಯೋಗ ಪ್ರದರ್ಶನ ಮಾಡುತ್ತ ಬಂದಿದ್ದೇವೆ ಎಂದಿದ್ದಾರೆ.

ಈ ಹಿಂದಿನ 7 ವಿಶ್ವ ಯೋಗ ದಿನ ಆಚರಣೆಯಲ್ಲಿ 2017 ಮತ್ತು  2018 ಮೈಸೂರಿನ ಯೋಗ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯ ವರ್ಷಗಳಾಗಿವೆ. 2017 ರಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳಾಗಿ `ರಣದೀಪ್’ ಅವರು ರೇಸ್ ಕೋರ್ಸ್ ನಲ್ಲಿ 50 ಸಾವಿರ ಯೋಗ ಪಟುಗಳನ್ನು ಒಂದೆಡೆ ಸೇರಿಸಿ ಗಿನ್ನಿಸ್ ದಾಖಲೆ ನಿರ್ಮಾಣ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. 2019 ರಲ್ಲಿ ಅದೇ ರೇಸ್ ಕೋರ್ಸ್ ನಲ್ಲಿ 70 ಸಾವಿರಕ್ಕೂ ಅಧಿಕ ಯೋಗ ಪಟುಗಳನ್ನು ಸೇರಿಸಿ ಆಗಿನ  ಜಿಲ್ಲಾಧಿಕಾರಿಗಳಾದಂತಹ  `ಅಭಿರಾಮ್ ಶಂಕರ್’  ಅವರು ಎಲ್ಲರ ಗಮನ ಸೆಳೆದಿದ್ದರು. ಈ ಇಬ್ಬರ  ಪ್ರಯತ್ನದಿಂದಾಗಿ  ಮುಂದೊಂದು ದಿನ 1 ಲಕ್ಷಕ್ಕಿಂತ ಅಧಿಕ ಯೋಗ ಪಟುಗಳನ್ನು ಸೇರಿಸಿ ಮತ್ತೊಮ್ಮೆ ದಾಖಲೆ ಸೃಷ್ಟಿಸ ಬಲ್ಲೆವು ಎಂಬ ಆತ್ಮವಿಶ್ವಾಸ ಮೈಸೂರಿಗಾರದ ನಮಗೆ ಬಂದಿದೆ ಎಂದು ಸ್ಮರಿಸಿದರು.