ಮನೆ ಉದ್ಯೋಗ ಸಿವಿಲ್ ಇಂಜಿನಿಯರ್’ಗಳ ಹುದ್ದೆ ನೇಮಕ: ದಾಖಲೆ ಪರಿಶೀಲನೆಗೆ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳ ವಿವರ

ಸಿವಿಲ್ ಇಂಜಿನಿಯರ್’ಗಳ ಹುದ್ದೆ ನೇಮಕ: ದಾಖಲೆ ಪರಿಶೀಲನೆಗೆ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳ ವಿವರ

0

ಕರ್ನಾಟಕ ಲೋಕಸೇವಾ ಆಯೋಗವು 330 ಸಿವಿಲ್ ಇಂಜಿನಿಯರ್’ಗಳ (ಲೋಕೋಪಯೋಗಿ ಇಲಾಖೆ ಹುದ್ದೆಗಳು) ನೇಮಕ ಸಂಬಂಧ, ಮೂಲ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ದಿನಾಂಕ ನಿಗದಿ ಮಾಡಿದೆ. ನವೆಂಬರ್ 03 ರವರೆಗೆ ನಡೆಯಲಿರುವ ಮೂಲ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸಲ್ಲಿಸಬೇಕಾದ ಪ್ರಮಾಣ ಪತ್ರಗಳ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

ಅಭ್ಯರ್ಥಿಗಳು ಹಾಜರುಪಡಿಸಬೇಕಾದ ಮೂಲ ದಾಖಲೆಗಳ ವಿವರ

ವಯೋಮಿತಿ ಅರ್ಹತೆ ಪ್ರಮಾಣ ಪತ್ರ (ಎಸ್ಎಸ್ಎಲ್ಸಿ ಅಂಕಪಟ್ಟಿ ಸಹ ಆಗುತ್ತದೆ)

ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ

ಜಾತಿ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು

ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು

ಕನ್ನಡ ಮಾಧ್ಯಮ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು

ಮಾಜಿ ಸೈನಿಕರ ಮೀಸಲಾತಿ ಪ್ರಮಾಣ ಪತ್ರಗಳು

ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ

ಅಂಗವಿಕಲ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರ

ಸೇವಾ ನಿರತ ಅಭ್ಯರ್ಥಿಗಳ ಪ್ರಮಾಣ ಪತ್ರ

ಸಂಬಂಧಪಟ್ಟ ತಾಲ್ಲೂಕು ತಾಹಶೀಲ್ದಾರ್ ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ

ಗುರುತಿಸುವಿಕೆಗಾಗಿ ಹಾಜರುಪಡಿಸಬೇಕಿರುವ ದಾಖಲೆಗಳು

ವಿಧವಾ ಪ್ರಮಾಣ ಪತ್ರ

ಹೈದೆರಾಬಾದ್ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ

2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಪ್ರಮಾಣ ಪತ್ರಗಳ ಪೈಕಿ ಮೀಸಲಾತಿಗೆ ಯಾವುದು ಅನ್ವಯವಾಗುತ್ತದೋ ಆ ಎಲ್ಲ ದಾಖಲೆಗಳನ್ನು ಹಾಜರು ಪಡಿಸಬೇಕಿರುತ್ತದೆ.

ಅಭ್ಯರ್ಥಿಗಳು ಮೇಲ್ಕಂಡ ಎಲ್ಲಾ ಮೂಲ ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಗಳನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಸಲ್ಲಿಸತಕ್ಕದ್ದು.

ಹಿಂದಿನ ಲೇಖನಮನೆಯಲ್ಲಿ ಕನ್ನಡಿ ಇಡುವ ಮುನ್ನ ಈ ವಾಸ್ತು ನಿಯಮ ನೆನಪಿರಲಿ
ಮುಂದಿನ ಲೇಖನಇಂಡಿಗೊ ವಿಮಾನದ ಎಂಜಿನ್’ಗಳಲ್ಲಿ ಬೆಂಕಿ: ತನಿಖೆಗೆ ಆದೇಶ