ಮನೆ ಯೋಗ ಮಾನಸಿಕ ಆರೋಗ್ಯಕ್ಕೆ ಯೋಗ ಹೆಲ್ಪ್‌ ಫುಲ್‌

ಮಾನಸಿಕ ಆರೋಗ್ಯಕ್ಕೆ ಯೋಗ ಹೆಲ್ಪ್‌ ಫುಲ್‌

0

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ನಿತ್ಯ ಹತ್ತು ನಿಮಿಷಗಳ ಕಾಲ ಯೋಗಾಸನ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮಾಡಬೇಕಾದ ಯೋಗ ಬಗ್ಗೆ ಇಲ್ಲಿದೆ ಮಾಹಿತಿ.

​ಶಶಾಂಕಾಸನ ಅಥವಾ ಮಗುವಿನ ಭಂಗಿ

  • ಹೆಸರೇ ಸೂಚಿಸುವಂತೆ, ಮಗುವೊಂದು ಅಂಗಾತ ಮಲಗಿರುವಂತೆ ಕಾಣುವ ಈ ಆಸನ ನರವ್ಯವಸ್ಥೆಗೆ ಪ್ರಚೋದನೆ ನೀಡುತ್ತದೆ ಹಾಗೂ ಇಡಿಯ ದೇಹಕ್ಕೆ ಮರು-ಚೈತನ್ಯ ನೀಡುತ್ತದೆ.
  • ಈ ಆಸನವನ್ನು ನಿರ್ವಹಿಸಲು ಮೊದಲು ಮೊಣಕಾಲುಗಳ ಮೇಲೆ ಕುಳಿತು ನಿಧಾನವಾಗಿ ಪೂರ್ಣ ಉಸಿರು ಎಳೆದುಕೊಳ್ಳುತ್ತಾ ಕೈಗಳನ್ನು ನೀಳವಾಗಿಸಿ ಬಾಗುತ್ತಾ ಎದೆ ಮತ್ತು ಹಣೆಯನ್ನು ನೆಲಕ್ಕೆ ತಾಗಿಸುವಂತೆ ಬಗ್ಗಬೇಕು.
  • ಕೈಗಳನ್ನು ಆದಷ್ಟೂ ದೂರ ಹಸ್ತ ಕೆಳಕ್ಕೆ ತಾಕಿಸುವಂತೆ ಇರಿಸಿ. ಈ ಸ್ಥಿತಿಯಲ್ಲಿ ಉಸಿರುಕಟ್ಟಿ ಸಾಧ್ಯವಿದ್ದಷ್ಟು ಹೊತ್ತು ಇರಬೇಕು ಮತ್ತು ಉಸಿರು ಬಿಡುತ್ತಾ ನಿಧಾನವಾಗಿ ಹಿಂದಕ್ಕೆ ಬರಬೇಕು. ಈ ಆಸನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸುತ್ತಾ ಬಂದರೆ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ನಿರಾಳತೆ ಪಡೆಯುವುದನ್ನು ಅನುಭವಿಸಬಹುದು.
  • ಇತರ ಆಸನಗಳಂತೆ ಈ ಆಸನವನ್ನೂ ಖಾಲಿಹೊಟ್ಟೆಯಲ್ಲಿ ಅಥವಾ ಊಟ ಮಾಡಿದ ಆರು ಘಂಟೆಗಳ ಬಳಿಕವೇ ನಿರ್ವಹಿಸಬೇಕು. ಆದರೆ, ಅಧಿಕ ರಕ್ತದೊತ್ತಡ ಮತ್ತು ಬೆನ್ನು ನೋವಿನ ಸಮಸ್ಯೆ ಇರುವ ವ್ಯಕ್ತಿಗಳಿಗೆ ಈ ಆಸನ ಸೂಕ್ತವಲ್ಲ.

​ವಿಪರೀತ ಕರಣಿ ಆಸನ

  • ತಲೆಯ ಭಾಗಕ್ಕೆ ರಕ್ತಸಂಚಾರ ಹೆಚ್ಚಿಸಲು ಈ ಆಸನ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ. ಉದ್ವೇಗ ಶಮನಗೊಳಿಸಲು, ಖಿನ್ನತೆ ಮತ್ತು ನಿದ್ರಾರಾಹಿತ್ಯ ಇರುವ ವ್ಯಕ್ತಿಗಳಿಗೆ ಈ ಆಸನ ಅತ್ಯುತ್ತಮ ಚಿಕಿತ್ಸೆಯಾಗಿದೆ ಹಾಗೂ ರಕ್ತಪರಿಚಲನೆಯನ್ನು ಸರಾಗಗೊಳಿಸಲು ನೆರವಾಗುತ್ತದೆ.
  • ಈ ಆಸನ ಅನುಸರಿಸಲು ಮೊದಲು ನೆಲದ ಮೇಲೆ ಬೆನ್ನು ಕೆಳಗಿರುವಂತೆ ಮಲಗಿ ಕಾಲುಗಳನ್ನು ಜೋಡಿಸಿ. ಪೂರ್ಣ ಉಸಿರನ್ನು ಎಳೆದುಕೊಳ್ಳುತ್ತಾ ಕಾಲುಗಳನ್ನು ಮೇಲಕ್ಕೆತ್ತಿ, ಕಾಲುಗಳು ತೊಂಭತ್ತು ಡಿಗ್ರಿ ಬರುವಾಗ ಎರಡೂ ಹಸ್ತಗಳನ್ನು ಸೊಂಟದ ಕೆಳಗಿನಿಂದ ನೆರವು ನೀಡುವ ಮೂಲಕ ನಿತಂಬಗಳು ಮೇಲಕ್ಕೇಳುವಂತೆ ಮಾಡಿ, ಪಾದಗಳನ್ನು ಜೋಡಿಸಿ ಆದಷ್ಟೂ ಮಟ್ಟಿಗೆ ಮೇಲಕ್ಕೆ ನೋಡುವಂತೆ ಸೆಳೆತ ನೀಡಿ.(ಇದೇ ಕಾರಣಕ್ಕೆ ಇದಕ್ಕೆ ವಿಪರೀತ ಎಂಬ ಪದ ನೀಡಲಾಗಿದೆ) ಈ ಹಂತ ಪೂರ್ಣಗೊಂಡಾಗ ಸೊಂಟ ನೆಲಗಿಂದ ನಲವತ್ತೈದು ಡಿಗ್ರಿಗಳಲ್ಲಿ ಮೇಲಕ್ಕೆದ್ದಿರಬೇಕು ಹಾಗೂ ಬೆನ್ನಿನ ಮೇಲ್ಭಾಗ ದಿಂದ ತಲೆ ನೆಲಕ್ಕೆ ತಾಕಿರಬೇಕು.
  • ಈ ಹಂತದಲ್ಲಿ ಉಸಿರುಕಟ್ಟಿ ಸಾಧ್ಯವಾದಷ್ಟು ಹೊತ್ತು ಇರಿ ಮತ್ತು ಇನ್ನೂ ಕೆಲವು ಉಸಿರುಗಳನ್ನು ಸಾಮಾನ್ಯವಾಗಿ ಉಸಿರಾಡಿ. ಬಳಿಕ ಪೂರ್ಣ ಉಸಿರು ಎಳೆದುಕೊಂಡು ನಿಧಾನವಾಗಿ ಬಿಡುತ್ತಾ ಪೂರ್ಣ ಉಸಿರು ಬಿಡುವ ಸಮಯದಲ್ಲಿ ಈ ಕ್ರಮ ಕ್ರಮಸಿದಂತೆಯೇ ವಿರುದ್ದವಾಗಿ ಮೊದಲ ಹಂತಕ್ಕೆ ಬನ್ನಿ.

​ಹಸ್ತ ಉತ್ತಾನಾಸನ

  • ಅಧಿಕ ರಕ್ತದೊತ್ತಡ, ಅಸ್ತಮಾ, ಸೈನುಸೈಟಿಸ್, ನಪುಂಸಕತವ ಹಾಗೂ ಮೂಳೆಗಳು ಶಿಥಿಲವಾಗಿರುವ ಓಸ್ಟಿಯೋಪೋರೋಸಿಸ್ ಮೊದಲಾದ ತೊಂದರೆಗಳಿರುವ ವ್ಯಕ್ತಿಗಳಿಗೆ ಈ ಆಸನ ಸೂಕ್ತವಾಗಿದೆ. ಜೊತೆಗೆ ಇದು ಅಲ್ಪ ಮಟ್ಟದ ಖಿನ್ನತೆ ಹಾಗೂ ನಿದ್ರಾಹೀನತೆಯನ್ನು ಗುಣಪಡಿಸಲೂ ನೆರವಾಗುತ್ತದೆ.
  • ಈ ಆಸನ ನಿರ್ವಹಿಸಲು ಮೊದಲು ನೇರವಾಗಿ ನಿಂತು ಉಸಿರನ್ನು ಪೂರ್ಣವಾಗಿ ಎಳೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ ಸಾಧ್ಯವಾದಷ್ಟು ಹಿಂದಕ್ಕೆ ಬಗ್ಗಬೇಕು. ಪಾದಗಳನ್ನು ಕೂಡಿಸಬೇಕು.
  • ಈ ಸ್ಥಿತಿ ಗರಿಷ್ಟ ಮಟ್ಟದಲ್ಲಿದ್ದಾಗ ಉಸಿರು ಕಟ್ಟಿ ಸಾಧ್ಯವಾದಷ್ಟು ಹೊತ್ತು ಇರಬೇಕು ಹಾಗೂ ಕೆಲವು ಉಸಿರುಗಳನ್ನು ಸಾಮಾನ್ಯವಾಗಿ ಉಸಿರಾಡಿ. ಬಳಿಕ ಪೂರ್ಣ ಉಸಿರು ಎಳೆದುಕೊಂಡು ನಿಧಾನವಾಗಿ ಬಿಡುತ್ತಾ ಮೊದಲ ಹಂತಕ್ಕೆ ಹಿಂದಿರುಗಬೇಕು.

ಶವಾಸನ

  • ಸಾಮಾನ್ಯವಾಗಿ ಇದು ಯೋಗಾಭ್ಯಾಸದ ಕಡೆಯ ಆಸನವಾಗಿ ನಿರ್ವಹಿಸಲಾಗುತ್ತದೆ ಹಾಗೂ ಮಾನಸಿಕ ಆರೋಗ್ಯ ಹಾಗೂ ದೈಹಿಕ ನಿರಾಳತೆಯನ್ನು ಪಡೆಯಲು ನೆರವಾಗುತ್ತದೆ.
  • ಈ ಆಸನ ನಿರ್ವಹಿಸಲು ಮೊದಲು ಬೆನ್ನ ಮೇಲೆ ಮಲಗಿ ಹಸ್ತಗಳು ಮೇಲಕ್ಕಿರುವಂತೆ ಇರಿಸಿ ಎರಡೂ ಕೈಗಳನ್ನು ಪಕ್ಕದಲ್ಲಿರಿಸಿ. ಕಣ್ಣುಗಳನ್ನು ಮುಚ್ಚಿ ಸಹಜವಾಗಿ ಉಸಿರಾಡುತ್ತಾ ಸುಮಾರು ಐದು ನಿಮಿಷಗಳವರೆಗೆ ಹಾಗೇ ಇರಿ.
  • ಇದು ಗರ್ಭಿಣಿಯರಿಗೂ ಸುರಕ್ಷಿತವಾದ ಆಸನವಾಗಿದೆ ಹಾಗೂ ಹೆರಿಗೆ ಪೂರ್ವ ಸಮಯದಲ್ಲಿ ಎದುರಾಗುವ ಮಾನಸಿಕ ಭಾವನೆಗಳ ಏರಿಳಿತಗಳನ್ನು ನಿರ್ವಹಿಸಲು ನೆರವಾಗುತ್ತದೆ. ನಿಧಾನವಾಗಿ ದಿನಗಳೆದಂತೆ ಅಭ್ಯಾಸ ಮಾಡುವುದು ಒಳ್ಳೆಯದು.