ಮನೆ ಯೋಗಾಸನ ಸದೃಢ ಮನಸ್ಸು, ದೇಹಾರೋಗ್ಯಕ್ಕೆ ಯೋಗವೇ ಮದ್ದು

ಸದೃಢ ಮನಸ್ಸು, ದೇಹಾರೋಗ್ಯಕ್ಕೆ ಯೋಗವೇ ಮದ್ದು

0

ಜನಜೀವನದ ಆಹಾರ, ವ್ಯಾಯಾಮ ಪದ್ಧತಿಯಲ್ಲಿ ವ್ಯತ್ಯಯಗಳು ಆಗಿದ್ದು ಅನಗತ್ಯ ಬೊಜ್ಜು, ಶಾರೀರಿಕ ತೊಂದರೆಗಳು ದೇಹವನ್ನಾವರಿಸಿರುತ್ತದೆ. ಸದೃಢ ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿ. ಸದೃಢ ಮನಸ್ಸಿದ್ದರೆ ಇನ್ನೊಬ್ಬರ ತಪ್ಪುಗಳನ್ನು ನಾವು ಕ್ಷಮಿಸಬಲ್ಲೆವು. ಸುಂದರ ಜಗತ್ತಿನ ಸ್ನೇಹಮಯ ಬದುಕಿನ ಸೃಷ್ಟಿಕತರರಾಗಬಲ್ಲೆವು. ಅಂತಹ ಮನೋನಿಗ್ರಹ ದೈಹಿಕ ಸುಖದ ತಳಪಾಯವಾದೀತು.

ಸ್ವಸ್ಥ ಮನಸ್ಸು

ಮಾನವ ಶರೀರವು ಪಂಚ ಮಹಾಭೂತಗಳ ಸಂಯೋಜನೆಯಿಂದಾದ ಸೃಷ್ಟಿ ಎಂಬ ಪರಿಕಲ್ಪನೆ ಇದೆ. ಅದೇ ಹಿನ್ನಲೆಯಲ್ಲಿ ಕೈಗೊಳ್ಳುವ ಚಿಕಿತ್ಸಾ ವಿಧಾನಗಳು ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಈ ತತ್ವಗಳನ್ನಾಧರಿಸಿಕೊಂಡಿವೆ. ಮನುಷ್ಯನ ಸುತ್ತಮುತ್ತಲಿರುವ ರೋಗಕ್ಕೆ ಕಾರಣವಾದ ಸೂಕ್ಷ್ಮಾಣು ಜೀವಿಗಳ ವಿರುದ್ಧ ಈ ದೇಹವನ್ನು ಪುನಶ್ಚೇತನಗೊಳಿಸುತ್ತದೆ.

ಪುನರುಜ್ಜೀವನದ ದೀಕ್ಷೆ ನೀಡುತ್ತದೆ. ನಾವು ತಿನ್ನುವ ಆಹಾರ, ಸೇವಿಸುವ ಗಾಳಿ ವಿಷಯುಕ್ತವಾಗಿರುತ್ತದೆ. ಆದರೆ ಪ್ರಕೃತಿ ಎಂದಿಗೂ ಮೋಸ ಮಾಡುವುದಿಲ್ಲ.

ಔಷಧರಹಿತ ಚಿಕಿತ್ಸಾ ಪದ್ಧತಿ ದೇಸೀ ಕ್ರಮ, ಉಪವಾಸ, ವ್ಯಾಯಾಮದಂತಹ ಚಿಕಿತ್ಸಾ ಕ್ರಮಗಳ ಮೂಲಕ, ಸಾತ್ವಿಕಆಹಾರದಂತಹ ಮಿತಿಗಳ ಮೂಲಕ ಮನುಷ್ಯನ ದೇಹದ ಮೇಲೆ ನಿಯಂತ್ರಣ ತರುವ ಕ್ರಮ ಇದಾಗಿದೆ. ಈ ಮೂಲಕ ದೇಹ ಹಾಗೂ ಮನಸ್ಸು ಎರಡನ್ನೂ ಸ್ವಸ್ಥವಾಗಿಡಲು ಸಾಧ್ಯ.

ಯೋಗದ ಆಚರಣೆಗಳ ಇದು ಯಾವುದೇ ನಿರ್ದಿಷ್ಟ ವರ್ಗಕ್ಕೆ ಸೀಮಿತಾವಾದುದುಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧಿಸಿದ್ದೇ ಆಗಿದೆ. ಪ್ರತಿದಿನ ಮಾಡುವ ಯೋಗ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಸರಳ ಯೋಗಗಳು ನಮ್ಮನ್ನು ಉಲ್ಲಸಿತ ವಾಗಿಡುತ್ತದೆ. ಯೋಗಾನುಷ್ಠಾನ ನಮ್ಮನ್ನು ಪ್ರಫ‌ುಲ್ಲವಾಗಿಸುತ್ತದೆ.

ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಯೋಗಃ ಚಿತ್ತ ವೃತ್ತಿ ನಿರೋಧಃ ಎನ್ನುತ್ತಾರೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ.

ಅಷ್ಟಾಂಗ ಯೋಗ

ಪತಂಜಲಿಯ ಗ್ರಂಥಗಳು “ಅಷ್ಟಾಂಗ ಯೋಗ’ ಎಂದು ವಿಶೇಷಣೆಗೆ ತಳಹದಿಯಾದವು. ಇಂದು ಬೋಧಿಸಲಾಗುತ್ತಿರುವ ಕಾರ್ಯತಃ ರಾಜಯೋಗದ ಪ್ರತಿ ರೂಪದ ಜೀವಾಳ ಲಕ್ಷಣವು ಇದೇ ಆಗಿದೆ.

ಆ 8 ಅಂಗಗಳೆಂದರೆ: ಯಮ (ಐದು ವರ್ಜನೆಗಳು ): ಅಹಿಂಸೆ, ಸತ್ಯಪಾಲನೆ, ಅತಿಯಾಸೆ ಪಡದಿರುವುದು, ಇಂದ್ರಿಯ ನಿಗ್ರಹ, ಮತ್ತು ಸ್ವಾಧೀನತೆಯ ನಿಗ್ರಹ.

ನಿಯಮ (ಐದು ಅನುಷ್ಟಾನಗಳು): ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ,ಮತ್ತು ದೇವರಲ್ಲಿ ಶರಣಾಗತಿ. ಆಸನ: ಧ್ಯಾನಕ್ಕೆ ಕುಳಿತುಕೊಳ್ಳುವ ಭಂಗಿ.

ಪ್ರಾಣಾಯಾಮ (ಉಸಿರನ್ನು ನಿಯಂತ್ರಿಸುವುದು): ಪ್ರಾಣ , ಉಸಿರು, “ಆಯಾಮ’, ನಿಯಂತ್ರಣ ಅಥವಾ ನಿಲ್ಲಿಸುವಿಕೆ. ಜೀವ ಶಕ್ತಿಯ ನಿಯಂತ್ರಣವೆಂದೂ ಸಹಾ ಅರ್ಥೈಸಲಾಗುತ್ತದೆ.

ಪ್ರತ್ಯಾಹಾರ (ಅಮೂರ್ತವಾಗಿರುವಿಕೆ): ಬಾಹ್ಯ ವಸ್ತುಗಳಿಂದ ಇಂದ್ರಿಯಗಳನ್ನು ದೂರವಿಡುವಿಕೆ.

ಧಾರಣ (ಏಕಾಗ್ರತೆ): ಗಮನವನ್ನು ಒಂದು ವಸ್ತುವಿನ ಮೇಲೆಯೇ ಕೇಂದ್ರೀಕರಿಸುವುದು.

ಧ್ಯಾನ (ಧ್ಯಾನ): ಧ್ಯಾನದ ಗುರಿಯ ಸ್ವಭಾವದತ್ತ ಅತೀವ ಚಿಂತನೆ. ಸಮಾಧಿ (ಬಿಡುಗಡೆ): ಧ್ಯಾನದ ಗುರಿಯಲ್ಲಿಯೇ ತನ್ನನ್ನು ಮಗ್ನನಾಗಿಸಿಕೊಳ್ಳುವುದು.

ಹಿಂದಿನ ಲೇಖನಈ ಮೂರು ಸಂದರ್ಭಗಳಲ್ಲಿ ನೀರು ಕುಡಿಯಬಾರದಂತೆ
ಮುಂದಿನ ಲೇಖನಹಾಸ್ಯ