ಬೆಂಗಳೂರು(Bengaluru): ಕೇಂದ್ರ ಸರ್ಕಾರ ಜಿಎಸ್ ಟಿಯನ್ನು ಶೇ.5ರಷ್ಟು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಜನತೆಯ ತೀವ್ರ ಖಂಡನೆಗೆ ಗುರಿಯಾದ ರಾಜ್ಯ ಸರ್ಕಾರ ಕೇವಲ ಮೊಸರು ಮಜ್ಜಿಗೆ, ಲಸ್ಸಿ,ಗಳಿಗೆ 50 ಪೈಸೆಯಿಂದ 2ರೂ ರವರೆಗೆ ದರ ಇಳಿಕೆ ಕಂಡಿದೆ.
ಸೋಮವಾರದಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ರೂ.1 ರಿಂದ ರೂ.3ರವರೆಗೆ ದರವನ್ನು ಹೆಚ್ಚಿಸಿದ್ದಂತಹ ಈ ಪದಾರ್ಥಗಳ ಬೆಲೆಗಳನ್ನು 50 ಪೈಸೆಯಿಂದ ರೂ.2 ರವರೆಗೆ ಕಡಿಮೆಗೊಳಿಸಿದೆ.
ಒಂದು ಕಿಲೊ ‘ನಂದಿನಿ’ ಮೊಸರಿನ ಪ್ಯಾಕೆಟ್ ಬೆಲೆ ಒಂದು ರೂಪಾಯಿ ಕಡಿಮೆ, ಅಂದರೆ ರೂ.45 ಆಗಿದೆ. 500 ಗ್ರಾಂ ಹಾಗೂ 200 ಗ್ರಾಂ ಪ್ಯಾಕೆಟ್ ಗಳ ಬೆಲೆ ಕ್ರಮವಾಗಿ ರೂ.೨೩ ಹಾಗೂ ರೂ.10.50 ಆಗಿದ್ದು, ಕ್ರಮವಾಗಿ ರೂ.1 ಹಾಗೂ ರೂ.1.50 ಯಷ್ಟು ಕಡಿಮೆಯಾಗಿದೆ. ಪ್ಯಾಕೆಟ್ ಗಳು, ಟೆಟ್ರಾ ಪ್ಯಾಕ್ ಹಾಗೂ ಪಿಇಟಿ ಬಾಟಲ್ ಗಳಲ್ಲಿ ಮಾರಾಟ ಮಾಡುವ ಮಜ್ಜಿಗೆಯ ಬೆಲೆ ಕ್ರಮವಾಗಿ ರೂ.7.50, ರೂ.10.50 ಹಾಗೂ ರೂ.12.50 ಆಗಲಿದ್ದು, ನಿನ್ನೆಯ ಬೆಲೆ ಏರಿಕೆಯ ಹೋಲಿಕೆಯಲ್ಲಿ 50 ಪೈಸೆ ಇಳಿಕೆ ಕಂಡಿದೆ.
ಆದರೆ ಲಸ್ಸಿ ಪ್ಯಾಕೆಟ್ ಗಳ ಪರಿಷ್ಕೃತ ಬೆಲೆಗಳಲ್ಲಿ ಅಂತಹ ಮಹತ್ತರವಾದ ವ್ಯತ್ಯಾಸವೇನೂ ಮಾಡಲಾಗಿಲ್ಲ. ಸಿಹಿ ಲಸ್ಸಿ ಹಾಗೂ ಮ್ಯಾಂಗೊ ಲಸ್ಸಿ ಟೆಟ್ರಾ ಪ್ಯಾಕೆಟ್ ಗಳ ದರವನ್ನು 50 ಪೈಸೆ ಇಳಿಸಲಾಗಿದೆ.