ಮನೆ ಸುದ್ದಿ ಜಾಲ ಮೈಸೂರಿನಲ್ಲಿ 9 ಬಾಲ ಕಾರ್ಮಿಕರ ರಕ್ಷಣೆ

ಮೈಸೂರಿನಲ್ಲಿ 9 ಬಾಲ ಕಾರ್ಮಿಕರ ರಕ್ಷಣೆ

0

ಮೈಸೂರು (Mysuru): ಮೈಸೂರು ಜಿಲ್ಲೆಯಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ 9 ಮಕ್ಕಳನ್ನು ರಕ್ಷಿಸಲಾಗಿದೆ.
ಮೈಸೂರು ಜಿಲ್ಲಾ ಪೊಲೀಸ್ ಘಟಕದ ಮಾನವ ಕಳ್ಳ ಸಾಗಾಣಿಕ ಘಟಕದ ವತಿಯಿಂದ ಮೈಸೂರು ಜಿಲ್ಲಾ ರಕ್ಷಣಾ ಘಟಕ, ಮೈಸೂರು ಜಿಲ್ಲಾ ವಿಶೇಷ ಪೊಲೀಸ್ ಘಟಕ, ಮಕ್ಕಳ ಸಹಾಯವಾಣಿ, ಸಮಾಜ ಕಲ್ಯಾಣ ಇಲಾಖೆ, ಡಾನ್ ಬಾಕ್ಸೋ ಎನ್.ಜಿ.ಓ ಸಂಸ್ಥೆಗಳ ಸಹಯೋಗದೊಂದಿಗೆ ಮೈಸೂರು ಜಿಲ್ಲೆಯ ಬನ್ನೂರು ಮತ್ತು ತಿ.ನರಸೀಪುರ ಪಟ್ಟಣಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಬನ್ನೂರು ಪಟ್ಟಣದಲ್ಲಿ ವಿವಿಧ ಅಂಗಡಿಗಳಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಹಮಾನ್ ಬಿನ್ ಜಾವಿದ್, ಕಾರ್ತಿಕ್ ಬಿನ್ ಚಿಕ್ಕಮಾಯಿಗೌಡ, ಅಬ್ರಾರ್, ಬಿನ್ ಅಕ್ರಂ, ಮಹಮದ್ ಸಲ್ಮಾನ್ ಬಿನ್ ಇಂತಿಯಾಜ್ ಪಾಷ ಇವರುಗಳನ್ನು ನಿಯಮಾನುಸಾರ ವಶಕ್ಕೆ ಪಡೆದು, ನಂತರ ತಿ.ನರಸೀಪುರ ಪಟ್ಟಣದಲ್ಲಿ ಏಕಾಂಗಿಯಾಗಿ ಭಿಕ್ಷೆ ಬೇಡುತ್ತಿದ್ದ ಮನು ಬಿನ್ ಮಹದೇವ ಎಂಬ ಮಗುವನ್ನು ವಶಕ್ಕೆ ಪಡೆದುಕೊಂಡು, ನಂತರ ವಿವಿಧ ಅಂಗಡಿಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಮೆ ಮಾಡುತ್ತಿದ್ದ ಸೂರಜ್ ಕುಮಾರ್ ಬಿನ್ ದುರ್ಗಾಸನ್ ಮಂಡಲ್, ಪುನೀತ್ ಬಿನ್ ರಾಜಣ, ರಿಹಾನ್ ಬಿನ್ ಅಕ್ಕರ್, ಚಂದ್ರಕುಮಾರ್ ಬಿನ್ ಬಸವರಾಜು ರವರುಗಳನ್ನು ಒಟ್ಟು 09 ಮಕ್ಕಳನ್ನು ವಶಕ್ಕೆ ಪಡೆದು, ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಲಾಗಿದೆ. ಸಮಿತಿಯು ಭಿಕ್ಷಾಟನೆ ಮಾಡುತ್ತಿದ್ದ ಮನು ಎಂಬ ಬಾಲಕನನ್ನು ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ.
ಉಳಿದ 08 ಜನ ಮಕ್ಕಳನ್ನು ಬಾಲಕರ ಬಾಲ ಮಂದಿರಕ್ಕೆ ಕಳುಹಿಸಲಾಗಿದ್ದು, ಕಾರ್ಯಾಚರಣೆಯನ್ನು ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಂ.ಎಸ್.ಪೂರ್ಣ ಚಂದ್ರ ತೇಜಸ್ವಿ ರವರ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆ ನಿರೀಕ್ಷಕರಾದ ವಿ.ಡಿ.ಮಮತ, ಉಪ ನಿರೀಕ್ಷಕರಾದ ಯಾಸ್ಮಿನ್ ತಾಜ್ ಮತ್ತು ಸಿಬ್ಬಂದಿಗಳಾದ ಹರೀಶ್ ಕುಮಾರ್, ದಾಕ್ಷಾಯಿಣಿ.ಎ, ರಾಮ್ ಪ್ರಸಾದ್ ಮತ್ತು ಚಾಲಕರಾದ ಚಿಕ್ಕಲಿಂಗಯ್ಯ ರವರು ಭಾಗವಹಿಸಿದ್ದರು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಲೋ ಬಿಪಿ ಇದ್ದವರು ಹೀಗೆ ಮಾಡಿ
ಮುಂದಿನ ಲೇಖನಮೊಸರು, ಲಸ್ಸಿ, ಮಜ್ಜಿಗೆ ದರ ಇಳಿಕೆ