ಮನೆ ಕಾನೂನು ನೀವು ಅಮಾಯಕರೇನೂ ಅಲ್ಲ: ರಾಮ್‌ ದೇವ್‌ ಗೆ ಸುಪ್ರೀಂಕೋರ್ಟ್ ಚಾಟಿ

ನೀವು ಅಮಾಯಕರೇನೂ ಅಲ್ಲ: ರಾಮ್‌ ದೇವ್‌ ಗೆ ಸುಪ್ರೀಂಕೋರ್ಟ್ ಚಾಟಿ

0

ಹೊಸದಿಲ್ಲಿ: “ನೀವು 3 ಬಾರಿ ನಮ್ಮ ನಿರ್ದೇಶನಗಳನ್ನು ಉಲ್ಲಂಘಿಸಿದ್ದೀರಿ. ನೀವು ಕೋರ್ಟ್‌ನಲ್ಲಿ ಏನಾ ಗುತ್ತಿದೆ ಎಂದು ಗೊತ್ತಿಲ್ಲದಷ್ಟು ಅಮಾಯಕರೇನೂ ಅಲ್ಲ. ನಿಮ್ಮನ್ನು ಕ್ಷಮಿಸಬೇಕೇ, ಬೇಡವೇ ಎಂದು ನಾವಿನ್ನೂ ನಿರ್ಧರಿಸಿಲ್ಲ.’

Join Our Whatsapp Group

ಇದು ಯೋಗಗುರು ಬಾಬಾ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡ ಪರಿ. ಹಾದಿತಪ್ಪಿಸುವ ಜಾಹೀರಾತು ಮತ್ತು ಅಲೋಪಥಿ ಬಗ್ಗೆ ಕೀಳಾಗಿ ಹೇಳಿಕೆ ಕೊಟ್ಟು ಸಂಕಷ್ಟಕ್ಕೆ ಸಿಲುಕಿರುವ ಪತಂಜಲಿ ಆಯುರ್ವೇದ ಸಂಸ್ಥೆಯ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅವರು ಮಂಗಳವಾರ ಕೋರ್ಟ್‌ಗೆ ಖುದ್ದು ಹಾಜರಾಗಿದ್ದು, ಅವರನ್ನು ನ್ಯಾ| ಹಿಮಾ ಕೊಹ್ಲಿ ಮತ್ತು ನ್ಯಾ| ಎ.ಅಮಾನುಲ್ಲಾ ಅವರಿದ್ದ ಪೀಠ ಮತ್ತೂಮ್ಮೆ ತರಾಟೆಗೆ ತೆಗೆದುಕೊಂಡಿತು.

ಇನ್ನು ಮುಂದೆ ಅಲೋಪಥಿ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡುವ ಪ್ರಯತ್ನ ನಡೆಸುವಂತಿಲ್ಲ ಎಂದು ಸೂಚಿಸಿದ ನ್ಯಾಯಪೀಠ, ಒಂದು ವಾರದೊಳಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವಂತೆ ಸೂಚಿಸಿತು. “ನಾವು ಪಶ್ಚಾತ್ತಾಪಪಟ್ಟಿದ್ದು, ಸಾರ್ವ ಜನಿಕವಾಗಿ ಕ್ಷಮೆ ಕೇಳಲು ಸಿದ್ಧ’ ಎಂದು ರಾಮ್‌ದೇವ್‌-ಬಾಲಕೃಷ್ಣ ಹೇಳಿದಾಗ, ಪ್ರತಿಕ್ರಿಯಿಸಿದ ನ್ಯಾಯಪೀಠ, “ಜಾಹೀರಾತು ನೀಡುವ ಮೂಲಕ ನಿಮಗೇನು ಬೇಕೋ ಹಾಗೆ ಮಾಡಿ. ಹಾಗಂತ, ನಿಮ್ಮನ್ನು ನಾವು ಇನ್ನೂ ಕ್ಷಮಿಸಿಲ್ಲ’ ಎಂದು ಹೇಳಿ, ವಿಚಾರಣೆಯನ್ನು ಎ.23ಕ್ಕೆ ಮುಂದೂಡಿತು.

ಈ ಹಿಂದೆ 2 ಬಾರಿ ರಾಮ್‌ದೇವ್‌, ಬಾಲಕೃಷ್ಣ ಸಲ್ಲಿಸಿದ್ದ ಕ್ಷಮಾಪಣೆಯನ್ನು ನ್ಯಾಯಾಲಯ ತಿರಸ್ಕರಿ ಸಿತ್ತು. ಕ್ಷಮಾಪಣ ಪತ್ರಗಳನ್ನು ಕೋರ್ಟ್‌ಗೆ ಸಲ್ಲಿಸುವ ಮುನ್ನವೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರಿಂದ ಕೆಂಡಾಮಂಡಲವಾಗಿದ್ದ ಪೀಠ, “ನಿಮಗೆ ಪ್ರಚಾರವೇ ಮುಖ್ಯ ಎಂಬುದು ಸ್ಪಷ್ಟವಾಗುತ್ತಿದೆ’ ಎಂದಿತ್ತು.

ಹಿಂದಿನ ಲೇಖನಅಮೇಥಿ ಕ್ಷೇತ್ರದಿಂದಲೂ ಸ್ಪರ್ಧೆ: ರಾಹುಲ್ ಗಾಂಧಿ ಘೋಷಣೆ
ಮುಂದಿನ ಲೇಖನಅಯೋಧ್ಯೆ ರಾಮಮಂದಿರದ ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ