ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದಕ್ಕೆ, ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅನ್ನು ನಟ ಪ್ರಕಾಶ್ ರಾಜ್ ಅಭಿನಂದಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ರಿಷಬ್ ಶೆಟ್ಟಿ ನಿಮ್ಮ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳು ನಮ್ಮ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು, ಕನ್ನಡ ಸಿನೆಮಾದ ಸಾಧ್ಯತೆಯನ್ನು ಹಿರಿಮೆಗೊಳಿಸಿದ ನಿಮ್ಮ ಹಾಗೂ ನಿಮ್ಮ ತಂಡಕ್ಕೆ ಓಳಿತಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರತಿಕ್ರಿಯೆಗೆ ರಿಷಬ್ ಶೆಟ್ಟಿ ಹೃದಯಪೂರ್ವಕ ಧನ್ಯವಾದಗಳು ಪ್ರಕಾಶ್ ಅಣ್ಣ ಎಂದು ತಿಳಿಸಿದ್ದಾರೆ.














