ಚಾಮರಾಜನಗರ(Mysuru): ಎರಡು ವರ್ಷ ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ನೋಂದಣಾಧಿಕಾರಿ ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲೇ ಯುವಕ ನಾಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೋಣನಕೆರೆಯ ವಸಂತ (20) ಮೋಸ ಹೋದ ಯುವತಿ.
ಬುಡಕಟ್ಟು ಸೋಲಿಗ ಸಮುದಾಯದವಳಾದ ಈಕೆ ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.
ಎರಡು ವರ್ಷ ಇವರ ಪ್ರೀತಿ ಮುಂದುವರೆದಿತ್ತು. ಆದರೆ ಹುಡುಗಿ ಮದುವೆಯಾಗು ಎಂದು ಹೇಳಿದ್ದಕ್ಕೆ ಹುಡುಗ ನಿರಾಕರಿಸಿದ್ದು, ನಂತರ
ಪಂಚಾಯಿತಿಯಲ್ಲಿ ಮದುವೆಯಾಗುವುದಾಗಿಯೂ ಒಪ್ಪಿಕೊಂಡಿದ್ದಾನೆ.
ಇನ್ನೇನು ಮದುವೆ ನೋಂದಣಿಗಾಗಿ ರಾಮಾಪುರಕ್ಕೆ ತೆರಳುವ ಮಾರ್ಗ ಮಧ್ಯೆಯೇ ಎಸ್ಕೇಪ್ ಆಗಿಬಿಟ್ಟಿದ್ದಾನೆ. ಸದ್ಯ ಮೋಸ ಹೋದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.














