ಮನೆ ರಾಜಕೀಯ ನಿಮ್ಮ ತಾತ ಕೂಡ ಹಿಂದೂ ಆಗಿದ್ದರು; ತನ್ವೀರ್‌ ಸೇಠ್‌ಗೆ ಪ್ರತಾಪ್‌ ಸಿಂಹ ಟಾಂಗ್

ನಿಮ್ಮ ತಾತ ಕೂಡ ಹಿಂದೂ ಆಗಿದ್ದರು; ತನ್ವೀರ್‌ ಸೇಠ್‌ಗೆ ಪ್ರತಾಪ್‌ ಸಿಂಹ ಟಾಂಗ್

0

ಮೈಸೂರು: ‘ಇದು ನಮ್ಮ ತಾತನದ್ದೇ ದೇಶ. ನಿಮ್ಮ ತಾತ ಕೂಡ ಹಿಂದು ಆಗಿದ್ದರು ಎಂಬುದನ್ನು ಮರೆಯಬೇಡಿ’ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿಕೆಗೆ ಸಂಸದ ಪ್ರತಾಪ್‌ಸಿಂಹ ಟಾಂಗ್ ನೀಡಿದ್ದಾರೆ.

‘ತನ್ವೀರ್‌ ಸೇಠ್‌ ಪೂರ್ವ ಜರು ಮೆಕ್ಕಾ, ಮದೀನಾದಿಂದ ಬಂದವರಲ್ಲ. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡವರು. ಇಲ್ಲೇ ಹುಟ್ಟಿ ಬೆಳೆದು ನಂತರ ಮತಾಂತರಗೊಂಡರು. ಯಾರೂ ಮೆಕ್ಕಾ, ಮದೀನ, ರೋಮ್‌, ಬೆತ್ಲಹೇಮ್‌ನಿಂದ ಬಂದವರಲ್ಲ. ಇದನ್ನು ತನ್ವೀರ್‌ ಸೇಠ್‌ ಅರ್ಥ ಮಾಡಿಕೊಂಡು ಮಾತನಾಡಿದರೆ ಒಳಿತು’ ಎಂದರು.

ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಧರಿಸಬೇಕು ಎಂದು ಸರಕಾರ ಆದೇಶ ಹೊರಡಿಸಿರುವುದನ್ನು ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಶಿಕ್ಷಣ ಸಚಿವರು ಹಾಗೂ ಸರಕಾರವನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

ಹಿಂದಿನ ಲೇಖನಶಾಲಾ ಮಕ್ಕಳಿಗೆ ಧಾನ್ಯ ವಿತರಣಾ ದಾಸ್ತಾನು ಗೋದಾಮಿಗೆ ಸಚಿವ ಕೆ.ಗೋಪಾಲಯ್ಯ ಭೇಟಿ, ಪರಿಶೀಲನೆ
ಮುಂದಿನ ಲೇಖನ`ಬಹುಕೃತ ವೇಷಂ’ ಚಿತ್ರದಲ್ಲಿ ನಾಯಕಿಯಾಗಿ ವೈಷ್ಣವಿಗೌಡ