ಮನೆ ಸುದ್ದಿ ಜಾಲ ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಯುವಕರು ಬಚಾವ್

ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಯುವಕರು ಬಚಾವ್

0

ಮೈಸೂರು: ಬೈಕ್ ಸವಾರನೋರ್ವ ಕಾಡಾನೆ ದಾಳಿಯಿಂದ ಕೊಂಚದರಲ್ಲೇ ಪಾರಾದ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮೈಸೂರು – ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ.

Join Our Whatsapp Group

ಎರಡು ದಿನಗಳ ಹಿಂದೆ ನಡೆದ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ.

ಇಬ್ಬರು ಬೈಕ್​ನಲ್ಲಿ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಮಾನಂದವಾಡಿಯಿಂದ ಮೈಸೂರು ಕಡೆ ಬರುತ್ತಿದ್ದರು. ಈ ವೇಳೆ, ಕಾಡಿನಿಂದ ಏಕಾಏಕಿ ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ, ಯುವಕರ ಮೇಲೆ ದಾಳಿಗೆ ಮುಂದಾಗಿದೆ. ಆಗ ಚಾಲಕ ತಕ್ಷಣ ಬೈಕ್​ ನಿಲ್ಲಿಸಿದ್ದಾನೆ. ಹಿಂಬದಿ ಸವಾರ ಬೈಕ್​ನಿಂದ ಇಳಿದು ಹಿಂದಕ್ಕೆ ಓಡಿ ಬಂದಿದ್ದು, ಚಾಲಕ ಬೈಕ್​ನ್ನು ಹಿಂತೆಗೆದುಕೊಂಡು ಬರುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಈ ವೇಳೆ ಸಮೀಪವೇ ಬಂದ ಕಾಡಾನೆ, ಅದೇ ರಸ್ತೆಯಲ್ಲಿ ಬಂದ ಲಾರಿ ಹಾರ್ನ್ ಶಬ್ದ ಹಾಗೂ ಚೀರಾಟ ಕಂಡು ಘೀಳಿಡುತ್ತಾ ರಸ್ತೆ ಪಕ್ಕಕ್ಕೆ ತೆರಳಿದೆ.

ತಕ್ಷಣ ಸವಾರನೂ ಬೈಕ್​ ಬಿಟ್ಟು ಓಡಿ ಬಂದಿದ್ದಾರೆ. ಸಮಯಪ್ರಜ್ಞೆ ಮೆರೆದ ಲಾರಿ ಚಾಲಕ ಅವರನ್ನು ತರಾತುರಿಯಲ್ಲಿ ಹತ್ತಿಸಿಕೊಂಡಿದ್ದಾನೆ. ಹೀಗಾಗಿ, ಯುವಕರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಅದನ್ನು ಕಂಡ ಕಾಡಾನೆ ಏನೂ ಮಾಡಲಾಗದೇ ರಸ್ತೆ ಪಕ್ಕದಲ್ಲೇ ನಿಂತಿದೆ. ಘಟನೆ ದೃಶ್ಯವು ಬೈಕ್​ ಹಿಂಬದಿ ಸವಾರದ ಹೆಲ್ಮೆಟ್​ ಕ್ಯಾಮರಾದಲ್ಲಿ ಸೆರೆಯಾಗಿದೆ.