ಮನೆ ರಾಜ್ಯ ಯುವಕರು, ವಿದ್ಯಾರ್ಥಿಗಳು ಬಸವಣ್ಣನವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು:  ಕೆ ಹರೀಶ್ ಗೌಡ

ಯುವಕರು, ವಿದ್ಯಾರ್ಥಿಗಳು ಬಸವಣ್ಣನವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು:  ಕೆ ಹರೀಶ್ ಗೌಡ

0

ಮೈಸೂರು: ಮಾನವ ಸಮಾಜದ ಬಗ್ಗೆ ಕ್ರಾಂತಿ ಮಾಡಿದ ಏಕೈಕ ವ್ಯಕ್ತಿ ಬಸವಣ್ಣನವರು. ಅವರ ವಚನಗಳ ಮೂಲಕವೇ ಸಮ ಸಮಾಜವನ್ನು ನಿರ್ಮಾಣಮಾಡಲು ಮುಂದಾದವರು. ಇಂತಹವರ ವಚನಗಳನ್ನು ಯುವಕರು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ಅವರು ಹೇಳಿದರು.

ಇಂದು ಕರ್ನಾಟಕ ಕಲಮಂದಿರದಲ್ಲಿ ನಡೆದ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಯಾವುದೇ ಜಾತಿ – ಧರ್ಮಕ್ಕೆ ಸೀಮಿಯವಾಗಿರದೆ ಎಲ್ಲಾ ಸಮಾನ ಸ್ಥಾನಮಾನಕ್ಕಾಗಿ ಕನಸು ಕಂಡು ಅದಕ್ಕಾಗಿ ಹೋರಾಡಿದವರು. ಅಂತಹ ಮಹಾನುಭಾವರಿಗೆ ವಿಶ್ವಗುರು ಎಂಬ ಬಿರುದನ್ನು ನಮ್ಮ ಮೈಸೂರಿನವರಾದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಅನುಷ್ಠಾನಗೊಳಿಸಿರುವುದು ಮೈಸೂರಿನವರಾದ ನಮಗೆ ಹೆಮ್ಮೆ ಎಂದರು.

ಇಂದಿನಿಂದ ಮೈಸೂರಿನಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ವಿಶ್ವಗುರು ಬರಹವಿರುವ ಭಾವಚಿತ್ರಗಳು ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್ತಿನ ಶಾಸಕರಾದ ಮರೀತೀಬ್ಬೆಗೌಡ ಅವರು ಮಾತನಾಡಿ ಬಸವಣ್ಣನವರನ್ನು ವಿಶ್ವಗುರು ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವುದು ಎಲ್ಲರಲ್ಲು ಸಂಚಲನ ಮೂಡಿಸಿದೆ.12 ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲಾ ಸಮಾಜದವರನ್ನು ಒಂದೂಗೂಡಿಸುವ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಬದುಕನ್ನೇ ಮೂಡಿಪಾಗಿಟ್ಟಿದ್ದಾರೆ. ಆದರೆ ಆ ಯೋಚನೆಗಳು, ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಂಡು ಅನುಸರಿಸುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟು. ಅದರ ಬದಲಾಗಿ ಮೌಢ್ಯತೆ, ಕಂಡಚಾರಗಳಿಗೆ ಒಳಗಾಗಿ ಪ್ರೀತಿ – ಸಹಬಾಳ್ವೆಯನ್ನು ಮರೆತಿದ್ದೇವೆ ಎಂದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಆಶಯದಲ್ಲಿ ಬಸವಣ್ಣನವರ ಸಂದೇಶಗಳು ಅಡಗಿವೆ. ಅವುಗಳನ್ನೇ ಕಾನೂನಿನ ರೂಪದಲ್ಲಿ ಅನುಸರಿಸುತ್ತಿದ್ದೇವೆ. ಬಸವಣ್ಣನವರ ವಚನಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ನಿವಾರಣೆ ಸೂತ್ರವನ್ನು ನೀಡಿದ್ದಾರೆ. ಹಾಗಾಗಿ ಅವುಗಳನ್ನು ಅಳವಡಿಸಿಕೊಕ್ಳಳುವುದು ಬಹಳ ಮುಖ್ಯ ಎಂದರು.

ಇಂದು ಸರ್ಕಾರ ಕೊಟ್ಟಿರುವ 5 ಗ್ಯಾರೆಂಟಿಗಳೂ ಸಹ ಬಸವಣ್ಣನವರ ಚಿಂತನೆಗಳೇ ಆಗಿದೆ. ಅವರ ಫೋಟೋ ಇಟ್ಟು ಪೂಜೆ ಮಾಡುವುದಷ್ಟೇ ಅಲ್ಲದೆ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಅದರ ಬಗ್ಗೆ ಅರಿವು ಮೂಡಿಸಿಕೊಳ್ಳಲು ಜನರು ಮುಂದಾಗಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ. ಕೆ. ವಿ ರಾಜೇಂದ್ರ ಅವರು ಮಾತನಾಡಿ ವಿಶ್ವಗುರು ಎಂಬ ಬಿರುದನ್ನು ಅಧಿಕೃತವಾಗಿ ಸರ್ಕಾರ ಘೋಷಿಸಿದ ನಂತರ ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸಿರುವ ಉದ್ದೇಶ ಅವರು ಸಮಾಜಕ್ಕಾಗಿ ಕೊಟ್ಟಿರುವ ಕೊಡುಗೆಗಳು, ಅವರ ಹೋರಾಟಗಳು ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವುದಾಗಿದೆ. ಸಮಾಜದ ಅಂಕು – ಡೊಂಕುಗಳನ್ನು ಅವರ ವಚನಗಳ ಮೂಲಕ ತಿದ್ದಿ ಹೇಳಿದ್ದಾರೆ. ಅವರ 12 ನೇ ಶತಮಾನದ ವಚನಗಳು ಇಂದಿಗೂ ಪ್ರಸ್ತುತ ಎಂದರು.

ಪ್ರತಿಯೊಬ್ಬ ವ್ಯಕ್ತಿಯು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮಾದರಿ ಜೀವನ ನಡೆಸಲು ಮುಂದಾಗಬೇಕು. ಇಂತಹ ಮಹಾನ್ ವ್ಯಕ್ತಿಯ ಭಾವಚಿತ್ರ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಮೊಳಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಸಿ.ಎನ್.ಮಂಜೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಎಂ ಗಾಯಿತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು  ಉಪಸ್ಥಿತರಿದ್ದರು.

ಹಿಂದಿನ ಲೇಖನತುಮಕೂರು: ಕಳೆದ ಒಂದು ವರ್ಷದಿಂದ ಗೃಹ ಬಂಧನದಲ್ಲಿದ್ದ ವೃದ್ಧೆಯ ರಕ್ಷಣೆ
ಮುಂದಿನ ಲೇಖನಸಂವಿಧಾನದ ತಳಹದಿಗೆ ಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ