ಭಾರತದ ಸ್ಕ್ವಾಶ್ ತಾರೆ ಸೌರವ್ ಘೋಸಲ್ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಮಲೇಶಿಯನ್ ಓಪನ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಉನ್ನತ ಶ್ರೇಯಾಂಕದ ಮೈಗುವೆಲ್ ರೋಡ್ರಿಗಸ್ ವಿರುದ್ಧ ಗೆದ್ದು ಚಾಂಪಿಯನ್ ಎನಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಸಿಸಿದ್ದಾರೆ ಸೌರವ್ ಘೋಸಲ್.

ಈ ಸಾಧನೆಯ ಬಳಿಕ ಸೌರವ್ ಘೋಸಲ್ ಪ್ರತಿಕ್ರಿಯಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. “ಖಂಡಿತವಾಗಿಯೂ ಇದು ಅದ್ಭುತವಾದ ಅನುಭವವಾಗಿದೆ. ಈ ಹಾದಿಯಲ್ಲಿ ನಾನು ಕೆಲ ಅತ್ಯುತ್ತಮ ಆಟಗಾರರ ವಿರುದ್ಧ ಗೆಲುವು ಸಾಧಿಸಿದ್ದೇನೆ” ಎಂದಿದ್ದಾರೆ ಸೌರವ್. ಕೌಲಲಾಂಪುರದಲ್ಲಿ ನಡೆದ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಸೌರವ್ ಘೋಸಲ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. “ಫೈನಲ್ ಪಂದ್ಯ ಮಾತ್ರ ತುಂಬಾ ಉತ್ಕೃಷ್ಟ ಮಟ್ಟದ ಪಂದ್ಯವಾಗಿತ್ತು. ಮೂರನೇ ಪಂದ್ಯದ ರೀತಿಯಲ್ಲಿಯೇ ಇದು ಇತ್ತು. ಎರಡನೆಯದ್ದು ಕೂ ಬಹಳ ಕಠಿಣವಾಗಿತ್ತು. ನಾನು 0-7ರಿಂದ ಹಿನ್ನಡೆಯಲ್ಲಿದ್ದೆ. ಈ ಗೆಲುವು ನನ್ನ ಎಲ್ಲಾ ಪರಿಶ್ರಮಕ್ಕೆ ದೊರೆತ ಫಲವಾಗಿದೆ” ಎಂದು ವಿಶ್ವದ 15ನೇ ಶ್ರೇಯಾಂಕಿತ ಆಟಗಾರ ಸೌರವ್ ಘೋಸಲ್ ಗೆಲುವಿನ ಸಂತಸವನ್ನು ವ್ಯಕ್ತಪಡಿಸಿದ್ದಾರೆ

ಮುಂದಿನ ಲೇಖನರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿವೃತ್ತ ಸೂಪರಿಂಟೆಂಡೆಂಟ್ಆಫ್ ಪೊಲೀಸ್ ಎನ್​.ನಾಗರಾಜಸ್ಪರ್ಧೆ