ಮನೆ ಅಪರಾಧ ನೆಲಮಂಗಲದಲ್ಲಿ ಸರಣಿ ಅಪಘಾತ: ಮೂರು ಕಾರುಗಳು ಜಖಂ

ನೆಲಮಂಗಲದಲ್ಲಿ ಸರಣಿ ಅಪಘಾತ: ಮೂರು ಕಾರುಗಳು ಜಖಂ

0

ನೆಲಮಂಗಲ(Nelamangala): ನಗರದಲ್ಲಿ ಅತಿವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡು ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು ರಸ್ತೆಯ ಮತ್ತೊಂದು ಬದಿಯಲ್ಲಿ ಬಿದ್ದು ಸರಣಿ ಅಪಘಾತ ಸಂಭವಿಸಿದೆ.

ಶುಕ್ರವಾರ ರಾತ್ರಿ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಬಳಿ ಘಟನೆ ನಡೆದಿದ್ದು, ಈ ಅಪಘಾತದಲ್ಲಿ ಮೂರು ಕಾರುಗಳು ಜಖಂಗೊಂಡಿವೆ.

ತುಮಕೂರಿನಿಂದ ಬರುತ್ತಿದ್ದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆಯ ಮತ್ತೊಂದು ಬದಿಗೆ ಹಾರಿದೆ. ಈ ವೇಳೆ ಸರಣಿ ಅಪಘಾತ ಸಂಭವಿಸಿದ್ದು, ಎದುರಿಗೆ ಬರುತ್ತಿದ್ದ ಎಕ್ಸ್ ಯುವಿ ಹಾಗೂ ಐ 10 ಕಾರಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಮೂರು ಕಾರು ಜಖಂಗೊಂಡಿವೆ, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಲೋಕಾಯುಕ್ತ ಬಲೆಗೆ ಬಿದ್ದ ಕಿತ್ತೂರು ತಹಶೀಲ್ದಾರ್: ಹಲವು ದಾಖಲೆ, 10 ಲಕ್ಷಕ್ಕೂ ಹೆಚ್ಚು ನಗದು ವಶ
ಮುಂದಿನ ಲೇಖನಛತ್ತೀಸಗಡ ಎನ್’ಕೌಂಟರ್: ಓರ್ವ ಮಹಿಳೆ ಸೇರಿದಂತೆ ಮೂವರು ನಕ್ಸಲರ ಹತ್ಯೆ