ಮನೆ ದೇವರನಾಮ ಭಾಗ್ಯದಾ ಲಕ್ಷ್ಮೀ ಬಾರಮ್ಮಾ ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ ಬಾರಮ್ಮಾ

0

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ

ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ

ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ

ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ

ಸಜ್ಜನ ಸಾಧು ಪೂಜೆಯ ವೇಳೆಗೆ

ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥೧॥

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಕನಕ ವೃಷ್ಟಿಯ ಕರೆಯುತ ಬಾರೆ

ಮನಕಾಮನೆಯ ಸಿದ್ದಿಯ ತೋರೆ

ಕನಕವೃಷ್ಟಿಯ ಕರೆಯುತ ಬಾರೆ

ಮನಕಾಮನೆಯ ಸಿದ್ಧಿಯ ತೋರೆ

ದಿನಕರ ಕೋಟಿ ತೇಜದಿ ಹೊಳೆಯುವ

ಜನಕರಾಯನ ಕುಮಾರಿ ಬೇಗ॥೨॥

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಅತ್ತಿತ್ತಗಲದೆ ಭಕ್ತರ ಮನೆಯೂಳು

ನಿತ್ಯಮಹೋತ್ಸವ ನಿತ್ಯ ಸುಮಂಗಲ

ಸತ್ಯವ ತೋರುತ ಸಾಧು ಸಜ್ಜನರ

ಚಿತ್ತದಿ ಹೊಳೆಯುವ ಪುತ್ಥಳಿಬೊಂಬೆ।।೩॥

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಸಂಖ್ಯೆ ಇಲ್ಲದಾ ಭಾಗ್ಯವ ಕೊಟ್ಟು

ಕಂಕಣ ಕೈಯಾ ತಿರುವುತ ಬಾರೆ

ಕುಂಕುಮಾಂಕಿತೆ ಪಂಕಜಲೋಚನೆ

ವೆಂಕಟರಮಣನ ಬಿಂಕದರಾಣಿ ॥೪॥

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಸಕ್ಕರೆ ತುಪ್ಪದ ಕಾಲುವೆ ಹರಿಸಿ

ಶುಕ್ರವಾರದಾ ಪೂಜೆಯ ವೇಳೆಗೆ

ಸಕ್ಕರೆ ತುಪ್ಪದ ಕಾಲುವೆ ಹರಿಸಿ

ಶುಕ್ರವಾರದಾ ಪೂಜೆಯ ವೇಳೆಗೆ

ಅಕ್ಕರೆ ಉಳ್ಳ ಅಳಗಿರಿ ರಂಗನ

ಚೊಕ್ಕ ಪುರಂದರ ವಿಠ್ಠಲನ ರಾಣಿ॥೫॥

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಹಿಂದಿನ ಲೇಖನಶಾಲೆಯಲ್ಲಿ ಮದ್ಯ ಸೇವಿಸಿ ಪಾಠ ಮಾಡುತ್ತಿದ್ದ ಇಬ್ಬರು ಶಿಕ್ಷಕಿಯರ ಅಮಾನತು
ಮುಂದಿನ ಲೇಖನಕಣ್ಣಿನ ಆರೋಗ್ಯ ಉತ್ತಮವಾಗಿಸುವ ಆಸನಗಳ ಕುರಿತು ಇಲ್ಲಿದೆ ಮಾಹಿತಿ