ಮನೆ ಅಪರಾಧ ಮುದ್ರಾ ಲೋನ್ ನೀಡುವುದಾಗಿ ನಂಬಿಸಿ 1.30 ಲಕ್ಷ ರೂ. ದೋಚಿದ ಸೈಬರ್ ಕಳ್ಳರು!

ಮುದ್ರಾ ಲೋನ್ ನೀಡುವುದಾಗಿ ನಂಬಿಸಿ 1.30 ಲಕ್ಷ ರೂ. ದೋಚಿದ ಸೈಬರ್ ಕಳ್ಳರು!

0

ಉಡುಪಿ: 50 ಲಕ್ಷ ರೂಪಾಯಿ ಮುದ್ರಾ ಲೋನ್ ನೀಡುವುದಾಗಿ ನಂಬಿಸಿ, 1, 30,900 ರೂಪಾಯಿಯನ್ನು ವಂಚಕರು ಲಪಟಾಯಿಸಿರುವ ಕುರಿತು ಉಡುಪಿ ಸೈಬರ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.

Join Our Whatsapp Group

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರಿನ ನಿವಾಸಿ ಸುರೇಶ್(43) ಎಂಬವರ ಮೊಬೈಲ್ ಗೆ ಫೆ.23ರಂದು ಮುದ್ರಾ ಲೋನ್ ಲಭ್ಯವಿರುವುದಾಗಿ ಅನಾಮಧೇಯ ಸಂದೇಶ ಬಂದಿದೆ.

ಇದನ್ನು ನಂಬಿದ ಅವರು ಮೆಸೇಜಿನಲ್ಲಿ ಉಲ್ಲೇಖಿಸಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ವೇಳೆ ಆ ನಂಬರಿನಿಂದ ಮಾತನಾಡಿದ ವ್ಯಕ್ತಿಯು ನಿಮಗೆ ಮುದ್ರಾ ಲೋನ್ ಲಭ್ಯವಿದ್ದು ಅದಕ್ಕೆ ಪೇಪರ್ ಚಾರ್ಜ್, ಇನ್ಶೂರೆನ್ಸ್ ಚಾರ್ಜ್, ಮುಂಗಡ ಶುಲ್ಕ ಸೇರಿದಂತೆ ಕೆಲವು ನಿರ್ದಿಷ್ಟ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದರು.

ಅದಾಗಲೇ ಆರೋಪಿಗಳ ಮಾತಿಗೆ ಮರುಳಾಗಿದ್ದ ಅವರು ಹೇಳಿದ ಖಾತೆಗಳಿಗೆ ಹಂತಹಂತವಾಗಿ ಒಟ್ಟು 1,30,900 ರೂಪಾಯಿ ಜಮೆ ಮಾಡಿದ್ದರು. ಆದರೆ ಮುದ್ರಾ ಲೋನ್ ಸಿಗದಾಗಲೇ ಸುರೇಶ್ ಅವರಿಗೆ ತಾನು ಮೋಸ ಹೋದ ಬಗ್ಗೆ ಅರಿವಾದದ್ದು. ತನಗೆ ವಂಚನೆಯಾಗಿರುವ ಬಗ್ಗೆ ಸುರೇಶ್ ಅವರು ಉಡುಪಿ ಸೆನ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಆರೋಗ್ಯ ಪ್ರಯೋಜನ ಹೊಂದಿರುವ ಶುಂಠಿ ಪುಡಿತಯಾರಿಸುವ ಸುಲಭ ಹಂತಗಳು
ಮುಂದಿನ ಲೇಖನ‘ರಾಘು’: ಸೋಲೋ ಆ್ಯಕ್ಟರ್ ಗೆಲ್ಲೋ ಸಿನಿಮಾ