ಮನೆ ರಾಜಕೀಯ ರಾಜ್ಯದಲ್ಲಿ 10-12 ಶಾಸಕರು ಬಿಜೆಪಿ ಸೇರಲಿದ್ದಾರೆ: ಆರ್. ಅಶೋಕ್

ರಾಜ್ಯದಲ್ಲಿ 10-12 ಶಾಸಕರು ಬಿಜೆಪಿ ಸೇರಲಿದ್ದಾರೆ: ಆರ್. ಅಶೋಕ್

0

ಬೆಂಗಳೂರು(Bengaluru): ಗುಜರಾತ್ ಫಲಿತಾಂಶ ನೋಡಿ ರಾಜ್ಯದಲ್ಲಿ ಸುಮಾರು 10 ರಿಂದ 12 ಶಾಸಕರು ಬಿಜೆಪಿ ಸೇರಲಿದ್ದಾರೆ. ಕೆಲ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಸಾಕಷ್ಟು ಜನರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ. ಸಾಕಷ್ಟು ಜನರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನಾಯಕತ್ವ ಇಲ್ಲದ ಕಾಂಗ್ರೆಸ್ ಜೊತೆ ಹೋದರೆ ಭವಿಷ್ಯ ಏನು ಎಂಬ ಆತಂಕ ಕೆಲವರಲ್ಲಿ ಇದೆ. 10 ರಿಂದ12 ಜನ‌ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಜೊತೆ ಮಾತನಾಡುತ್ತಿದ್ದೇವೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

ಬಿಜೆಪಿ ಪರವಾದ ಫಲಿತಾಂಶ ಗುಜರಾತ್​’ನಲ್ಲಿದೆ. ಇವೆಲ್ಲವೂ ಕರ್ನಾಟಕದ ಮುಂದಿನ ಚುನಾವಣೆಗೆ ದಾರಿದೀಪವಾಗಿದೆ. ದೇಶದ ಜನರು ಕಾಂಗ್ರೆಸ್ ತಿರಸ್ಕಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಇದ್ದ ಕಡೆ ಆಪ್ ಅವರ ಸ್ಥಳ ತುಂಬುತ್ತಿದೆ. ಕಾಂಗ್ರೆಸ್ ಸೋಲಿಸಲು ಆಮ್ ಆದ್ಮಿ ಪಕ್ಷ ಸಾಕು ಎಂಬ ಸಂದೇಶ ಈ ಚುನಾವಣೆಯಲ್ಲಿ ಸಿಕ್ಕಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ವೋಟ್ ಶೇರಿಂಗ್ ಅಪ್‌ ಕಡೆ ಶಿಫ್ಟ್ ಆಗುತ್ತಿದೆ. ಕರ್ನಾಟಕದಲ್ಲಿ ಇದೇ ಸ್ಥಿತಿ ನಿರ್ಮಾಣ ಆಗಲಿದೆ. ಆಪ್ 4% ಓಟ್ ಪಡೆದುಕೊಂಡರೆ ಕಾಂಗ್ರೆಸ್ ಧೂಳಿಪಟವಾಗಲಿದೆ. ಕಾಂಗ್ರೆಸ್ ಅವರು ಗಂಟುಮೂಟೆ ಕಟ್ಟಿ ಮನೆಗೆ ಹೋಗಲು ತಯಾರು ಆಗಿರಬೇಕು. ಹಳೆ ಸಿದ್ಧಾಂತ ಹಳೆ ಸ್ಟೈಲು ಮುಗಿದ ಅಧ್ಯಾಯ. ಎರಡು ಚುನಾವಣೆ ಕಾಂಗ್ರೆಸ್ ಬಾಗಿಲನ್ನು ಮುಚ್ಚಿದೆ ಎಂದು ಹೇಳಿದರು.

ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಸರ್ವೇ ನೋಡಿ ಟಿಕೆಟ್ ಹಂಚಿಕೆ ಮಾಡಲಾಗುತ್ತೆ. ಯಾರು ಗೆಲ್ಲಲ್ಲ ಎಂಬುದನ್ನು ಕೇಂದ್ರ ನಾಯಕರು ಗಮನ ಹರಿಸುತ್ತಾರೆ. ಗೆಲುವಿಗೆ ಏನು ಸ್ಟ್ರಾಟಜಿ ಮಾಡಬೇಕು ಅದನ್ನು ಜನವರಿಯಿಂದ ಮಾಡಲಾಗುತ್ತದೆ. ಕರ್ನಾಟಕ ಮಾಡೆಲ್’​ನಲ್ಲಿ ಗೆಲ್ಲಲು ತೀರ್ಮಾನ ಕೈಗೊಳ್ಳಲಾಗುವುದು. ಎರಡನೇ ಸರ್ವೇ ವರದಿ ಆಧಾರದಲ್ಲಿ ಟಿಕೆಟ್ ಹಂಚಿಕೆ ನಿರ್ಧಾರ ಮಾಡಲಾಗುತ್ತದೆ ಎಂದರು.

ಹಿಂದಿನ ಲೇಖನಬೆಳಗಾವಿ ನಮ್ಮದು, ಒಂದಿಂಚನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ
ಮುಂದಿನ ಲೇಖನಮತದಾರರ ಮಾಹಿತಿ ಕಳವು ಪ್ರಕರಣ: ಶ್ರೀನಿವಾಸ್ ಅಮಾನತು ತಡೆಗೆ ನಕಾರ; ದಾಖಲೆ ಸಲ್ಲಿಸಲು ತನಿಖಾಧಿಕಾರಿಗೆ ಹೈಕೋರ್ಟ್ ಆದೇಶ