ಮನೆ ಕ್ರೀಡೆ ಆಸ್ಟ್ರೇಲಿಯಾ ವಿರುದ್ಧ 100 ವಿಕೆಟ್: ಆರ್.ಅಶ್ವಿನ್ ದಾಖಲೆ

ಆಸ್ಟ್ರೇಲಿಯಾ ವಿರುದ್ಧ 100 ವಿಕೆಟ್: ಆರ್.ಅಶ್ವಿನ್ ದಾಖಲೆ

0

ನವದೆಹಲಿ: ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ 100 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

ಅಷ್ಟೇ ಅಲ್ಲದೇ ಆಸ್ಟ್ರೇಲಿಯ ವಿರುದ್ಧ ಕೆಂಪು ಚೆಂಡಿನ ಆಟದಲ್ಲಿ ಅನಿಲ್ ಕುಂಬ್ಳೆ ಬಳಿಕ 100 ವಿಕೆಟ್ ಪಡೆದ ಖ್ಯಾತಿಗೂ ಆರ್.ಅಶ್ವಿನ್ ಪಾತ್ರವಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಪಂದ್ಯಗಳ ಪೈಕಿ ತಮ್ಮ 20ನೇ ಪಂದ್ಯವಾಡುತ್ತಿರುವ ಆರ್. ಅಶ್ವಿನ್ ಕುಂಬ್ಳೆ ಬಳಿಕ 100 ವಿಕೆಟ್ ಕಬಳಿಸಿದ ಎರಡನೇ ಭಾರತೀಯ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.

ಅನಿಲ್ ಕುಂಬ್ಳೆ 111 ವಿಕೆಟ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೇ ಆರ್. ಅಶ್ವಿನ್ ಇನ್ನೂ ಪಂದ್ಯವಾಡುತ್ತಿರುವ ಕಾರಣ ಕುಂಬ್ಳೆ ದಾಖಲೆ ಪುಡಿಗಟ್ಟುವ ಎಲ್ಲಾ ಸಾಧ್ಯತೆಗಳಿವೆ.

ಒಟ್ಟಾರೆಯಾಗಿ, ವಿಶ್ವ ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿದ 15ನೇ ಬೌಲರ್ ಎಂಬ ಹಿರಿಮೆಗೆ ಭಾರತದ ಈ 36 ವರ್ಷದ ಆಫ್-ಸ್ಪಿನ್ನರ್ ಪಾತ್ರವಾಗಿದ್ದಾರೆ. ಇಂಗ್ಲೆಂಡ್’ನ ದಂತಕಥೆ ಇಯಾನ್ ಬಾಥಂ ನಂ.1  ಸ್ಥಾನದಲ್ಲಿದ್ದಾರೆ. ಅವರು ಈವರೆಗೆ ಆಸ್ಟ್ರೇಲಿಯಾ ವಿರುದ್ಧ 36 ಟೆಸ್ಟ್ ಪಂದ್ಯಗಳನ್ನಾಡಿದ್ದು, 148 ವಿಕೆಟ್ ಪಡೆದು ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.  ಎರಡನೇ ಸ್ಥಾನದಲ್ಲಿ ವೆಸ್ ಇಂಡೀಸ್’ನ ಕೌರ್ಟ್ನೀ ವಾಲ್ಶ್ ಅವರಿದ್ದು, 38 ಪಂದ್ಯಗಳಿಂದ 135 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಇಂಗ್ಲಂಡ್’ನ ವೇಗಿ ಸ್ಟುವರ್ಟ್ ಬ್ರಾಡ್ 35 ಪಂದ್ಯಗಳಿಂದ  131 ವಿಕೆಟ್ ಕಬಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 8 ವಿಕೆಟ್ ಕೀಳುವ ಮೂಲಕ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ರು. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲೂ ತಮ್ಮ ಪರಾಕ್ರಮ ಮುಂದುವರೆಸಿರುವ ಆರ್. ಅಶ್ವಿನ್ 3 ವಿಕೆಟ್ ಕಿತ್ತಿದ್ದಾರೆ. ಅವರು ಆಸ್ಟ್ರೇಲಿಯಾ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ವಿಕೆಟ್ ಕೀಳುವ ಮೂಲಕ ಆಸ್ಟ್ರೇಲಿಯಾ ವಿರುದ್ಧ 100 ವಿಕೆಟ್ ಕಬಳಿಸಿದ ಎರಡನೇ ಭಾರತೀಯ ಬೌಲರ್ ಎಂಬ ದಾಖಲೆ ಬರೆದರು.

ಹಿಂದಿನ ಲೇಖನಕಾಂಗ್ರೆಸ್’ನ ಹಿರಿಯ ನಾಯಕ ಕೆ.ಆರ್.ರಮೇಶ್ ಕುಮಾರ್ ಪತ್ನಿ ವಿಜಯಮ್ಮ ನಿಧನ
ಮುಂದಿನ ಲೇಖನಮಹಾಶಿವರಾತ್ರಿ: ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನಕ್ಕೆ ಚಿನ್ನದ ಕೊಳಗ ಹಸ್ತಾಂತರ