ಮನೆ ರಾಜ್ಯ ಬಾಲ ಮಂದಿರದಿಂದ 119 ಮಕ್ಕಳು ನಾಪತ್ತೆ

ಬಾಲ ಮಂದಿರದಿಂದ 119 ಮಕ್ಕಳು ನಾಪತ್ತೆ

0

ಬೆಂಗಳೂರು (Bengaluru): ರಾಜ್ಯದ ಸರ್ಕಾರಿ ಮಕ್ಕಳ ಆರೈಕೆ ಕೇಂದ್ರ(ಬಾಲ ಮಂದಿರ)ಗಳಿಂದ ಈವರೆಗೆ 484 ಮಕ್ಕಳು ಕಾಣೆಯಾಗಿದ್ದಾರೆ. ಆ ಪೈಕಿ ಇನ್ನೂ 119 ಮಕ್ಕಳು ಪತ್ತೆಯಾಗಿಲ್ಲ.

ಈ ಬಗ್ಗೆ ಸರ್ಕಾರ ಹೈಕೋರ್ಟ್‌ ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ಕೋಲಾರದ ಕೆ.ಸಿ.ರಾಜಣ್ಣ ಸಲ್ಲಿರುವ ಪಿಐಎಲ್‌ ಹಂಗಾಮಿ ಸಿಜೆ ಅಲೋಕ್‌ ಅರಾಧೆ ಹಾಗೂ ನ್ಯಾ.ಎಸ್‌. ವಿಶ್ವಜಿತ್‌ಶೆಟ್ಟಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ನ್ಯಾಯಾಲಯದ ಹಿಂದಿನ ಆದೇಶದಂತೆ ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಿದ ಸರ್ಕಾರಿ ಪರ ವಕೀಲರು ಈ ವಿಷಯ ತಿಳಿಸಿದರು.

ಸರ್ಕಾರದ ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರ ವರದಿ ಸಲ್ಲಿಸಿ ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಈ ವರದಿಯ ನಂತರ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿ ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎಸ್‌.ಉಮಾಪತಿ ವಾದ ಮಂಡಿಸಿದರು.

2022ರ ಮಾಹಿತಿ

2022ರ ಫೆಬ್ರವರಿವರೆಗೆ ಪತ್ತೆ ಮಾಡಲಾದ 13 ಮಕ್ಕಳಲ್ಲಿ 11 ಮಕ್ಕಳು ಪೋಷಕರೊಂದಿಗೆ ವಾಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳು ಬಾಲ ಮಂದಿರಗಳಲ್ಲಿದ್ದಾರೆ. ನಾಪತ್ತೆಯಾಗಿರುವ 119 ಮಕ್ಕಳ ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ಮಾನವ ಕಳ್ಳಸಾಗಾಣಿಕೆ ತಡೆ ಘಟಕ (ಎಎಚ್‌ಟಿಯು)ಗಳಿಗೆ ಮತ್ತು 53 ಪ್ರಕರಣ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ಅನುಪಾಲನಾ ವರದಿಯಲ್ಲಿ ತಿಳಿಸಿದೆ.

484-ನಾನಾ ಬಾಲಮಂದಿರಗಳಿಂದ ನಾಪತ್ತೆ ಮಕ್ಕಳು, 352-ಮಕ್ಕಳು ಪತ್ತೆ, 340-ಪತ್ತೆಯಾಗಿರುವ ಮಕ್ಕಳ ಪೈಕಿ 340 ಮಕ್ಕಳು ಪೋಷಕರೊಂದಿಗೆ ವಾಸ, 02-ಎಚ್‌ಐವಿ-ಟಿಬಿ ಕಾಯಿಲೆಯಿಂದ ಸಾವು.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನರಾಜ್ಯದಲ್ಲಿ ನಾಲ್ಕು ದಿನ ಭಾರಿ ಮಳೆ ಸಾಧ್ಯತೆ