ಮನೆ ಸುದ್ದಿ ಜಾಲ ಸನ್ನಡತೆ ಆಧಾರದ ಮೇಲೆ ಮೈಸೂರಿನ ಕಾರಾಗೃಹದ 12 ಮಂದಿಗೆ ಬಿಡುಗಡೆ ಭಾಗ್ಯ

ಸನ್ನಡತೆ ಆಧಾರದ ಮೇಲೆ ಮೈಸೂರಿನ ಕಾರಾಗೃಹದ 12 ಮಂದಿಗೆ ಬಿಡುಗಡೆ ಭಾಗ್ಯ

0

ಮೈಸೂರು (Mysuru)-ಸನ್ನಡತೆ ಆಧಾರದ ಮೇಲೆ ಮೈಸೂರಿನ ಕೇಂದ್ರ ಕಾರಾಗೃಹದಿಂದ 14 ಮಂದಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಜೈಲು ಹಕ್ಕಿಗಳು ಬಂಧ ಮುಕ್ತರಾದರು.
ಜೀವಾವಧಿ ಶಿಕ್ಷೆಗೊಳಗಾಗಿ ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 12 ಮಂದಿ ಖೈದಿಗಳಿಗೆ ಗುರುವಾರ ಬಿಡುಗಡೆ ಭಾಗ್ಯ ದೊರೆಯಿತು.
ಮಂಡಿ ಮೊಹಲ್ಲಾದ ಮನೋಹರ, ಕೈಲಾಸಪುರಂನ ಅಫ್ರೋಜ್ ಪಾಷ, ವಿದ್ಯಾರಣ್ಯಪುರಂನ ರಂಗಸ್ವಾಮಿ, ತಿ.ನರಸೀಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದ ಶಿವಪ್ರಕಾಶ್, ಹನುಮನಾಳು ಗ್ರಾಮದ ವೆಂಕಟೇಶ್, ತಲಕಾಡು ಅರುಂಧತಿ ನಗರದ ಚಂದ್ರ, ಪಿರಿಯಾಪಟ್ಟಣದ ಬಿ.ಪಿ.ರಜಾಕ್, ತಮ್ಮಡಹಳ್ಳಿ ಗ್ರಾಮದ ಮಹದೇವ, ಆವರ್ತಿ ಗ್ರಾಮದ ಹೇಮಂತ, ಕೆ.ಆರ್.ಪೇಟೆ ತಾಲೂಕು ಐಚನಹಳ್ಳಿ ಗ್ರಾಮದ ಸುರೇಶ್, ಕೊಳ್ಳೇಗಾಲ ತಾಲೂಕು ಕನ್ನೂರು ಗ್ರಾಮದ ಆನಂದ, ಹುಲ್ಲಹಳ್ಳಿಯ ಮಹದೇವನಾಯ್ಕ ಅವರನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಸನ್ನಡತೆ ಆಧಾರದ ಮೇಲೆ 12 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಯಾವುದೋ ಸಂದರ್ಭದಲ್ಲಿ ಆದ ಕೆಟ್ಟ ಘಟನೆಯಿಂದಾಗಿ ಕಾನೂನು ಶಿಕ್ಷೆ ಅನುಭವಿಸಿದ್ದಾರೆ. ಕಾರಾಗೃಹದಲ್ಲಿ ಅವರು ತೋರಿದ ಒಳ್ಳೆಯ ನಡತೆಯ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕಾರಾಗೃಹದಲ್ಲಿ ಅವರನ್ನು ನಂಬರಿನಿಂದ ಕರೆಯುತ್ತಿದ್ದರು. ಇದೀಗ ಅವರನ್ನು ಹೆಸರಿನಿಂದ ಕರೆಯುತ್ತಾರೆ.
ಇನ್ನು ಮುಂದೆ ಅವರು ಸಮಾಜಕ್ಕೆ ಮಾದರಿ ನಾಗರಿಕರಾಗಿ ಬದುಕಬೇಕು ಎಂದರು.
ಬಿಡುಗಡೆಗೊಂಡ ಖೈದಿ ಬಿ.ಪಿ.ರಜಾಕ್, ನನ್ನ ಮೂರು ವರ್ಷದ ಮಗಳನ್ನು ಎತ್ತಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದೆ. ನನ್ನ ಸಂಬಂಧಿಯೊಬ್ಬರು ನನ್ನ ಮೇಲಿನ ದ್ವೇಷಕ್ಕೆ ಹಿಂದಿನಿಂದ ಬಂದು ಹಲ್ಲೆ ಮಾಡಿದರು. ಈ ವೇಳೆ ನನ್ನ ಮಗಳ ಮೃತಪಟ್ಟಳು. ಅವಳನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಶಿಕ್ಷೆಯಾಯಿತು. ೧೭ ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದೇನೆ ಎಂದರು.

ಹಿಂದಿನ ಲೇಖನಕೊಳ್ಳೇಗಾಲ: ಜೂಜಾಡುತ್ತಿದ್ದ ನಾಲ್ವರ ಬಂಧನ
ಮುಂದಿನ ಲೇಖನಅಕ್ರಮ ಮದ್ಯ ಮಾರಾಟ: ಮಹಿಳೆ ಬಂಧನ