ಮನೆ ಸುದ್ದಿ ಜಾಲ ಕಮರಿಗೆ ಉರುಳಿದ ಬಸ್: 14 ಮಂದಿ ದುರ್ಮರಣ

ಕಮರಿಗೆ ಉರುಳಿದ ಬಸ್: 14 ಮಂದಿ ದುರ್ಮರಣ

0

ನವದೆಹಲಿ: ಮದುವೆ ಸಮಾರಂಭ ಮುಗಿಸಿ ತೆರಳುತ್ತಿದ್ದ ಬಸ್‌ವೊಂದು ಚಂಪಾವತ್ ಜಿಲ್ಲೆಯ ಬುದಮ್ ಗ್ರಾಮದ ಸುಖೀದಂಗ್ ರೀತಾ ಸಾಹಿಬ್ ರಸ್ತೆಯಲ್ಲಿ ಕಮರಿಗೆ ಉರುಳಿದ ದುರ್ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.’ಮದುವೆ ಮುಗಿಸಿಕೊಂಡು ತೆರಳುತ್ತಿದ್ದ ಬಸ್‌ ಇಂದು (ಮಂಗಳವಾರ) ಮುಂಜಾನೆ ಅಪಘಾತಕ್ಕೀಡಾಗಿದೆ. ಈ ವೇಳೆ 14 ಮಂದಿ ಮೃತಪಟ್ಟಿದ್ದಾರೆ’ ಎಂದು ಕಮೌನ್ ಪ್ರಾಂತ್ಯದ ಡಿಐಜಿ ನಿಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್‌) ತಲಾ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡಿರುವವರಿಗೂ ತಲಾ ₹ 50,000 ನೆರವು ಪ್ರಕಟಿಸಿದ್ದಾರೆ.

ಹಿಂದಿನ ಲೇಖನತಾಯಿ ಮಗಳ ಕೊಲೆ: ಆರೋಪಿ ಬಂಧನ
ಮುಂದಿನ ಲೇಖನವಿಧಾನಸಭೆಯಲ್ಲಿ ವಿಧಾನಮಂಡಲದವರ ಸಂಬಳ, ನಿವೃತ್ತಿ ವೇತನ ವಿಧೇಯಕ ಮಂಡನೆ: ಅಂಗೀಕಾರ