ಮನೆ ಅಪರಾಧ ತಾಯಿ ಮಗಳ ಕೊಲೆ: ಆರೋಪಿ ಬಂಧನ

ತಾಯಿ ಮಗಳ ಕೊಲೆ: ಆರೋಪಿ ಬಂಧನ

0

ಬೆಂಗಳೂರು: ಗೋವಿಂದರಾಜನಗರ ಠಾಣೆ ವ್ಯಾಪ್ತಿಯ ಮೂಡಲಪಾಳ್ಯದಲ್ಲಿ ಮಾರಕಾಸ್ತ್ರದಿಂದ ಹೊಡೆದು ತಾಯಿ-ಮಗಳನ್ನು ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾವಿತ್ರಿ ಹಾಗೂ ಅವರ ತಾಯಿ ಸರೋಜಮ್ಮ ಕೊಲೆಯಾದವರು. ಅವರಿಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಸಾವಿತ್ರಿ ಅವರ ಪತಿ ರವಿಕುಮಾರ್ ಎಂಬಾತ ಕೃತ್ಯ ಎಸಗಿರುವುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ‌ ರವಿಕುಮಾರ್ ಹಾಗೂ ಸಾವಿತ್ರಿ‌ ದಂಪತಿ‌ ನಡುವೆ‌ ಕೌಟುಂಬಿಕ ಕಲಹವಿತ್ತು. ಇದೇ ವಿಚಾರವಾಗಿ ಹಲವು ಬಾರಿ ಜಗಳ ಆಗಿತ್ತು ಎಂದೂ ತಿಳಿಸಿದರು.

‘ಸೋಮವಾರ ರಾತ್ರಿಯೂ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ‌ ಹೋಗಿತ್ತು. ಇದೇ ವೇಳೆಯೇ ರವಿಕುಮಾರ್, ಪತ್ನಿ ಸಾವಿತ್ರಿ ಅವರಿಗೆ ಮಾರಕಾಸ್ತ್ರದಿಂದ ಹೊಡೆದು ಕೊಂದಿದ್ದ. ಜಗಳ‌ ಬಿಡಿಸಲು ಹೋಗಿದ್ದ ಅತ್ತೆ ಸರೋಜಮ್ಮ ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ಪೊಲೀಸರು ಹೇಳಿದರು.

ಹಿಂದಿನ ಲೇಖನಪತಿ ನಿಂದನೆಗೆ ಮನನೊಂದು ಪತ್ನಿಆತ್ಮಹತ್ಯೆ
ಮುಂದಿನ ಲೇಖನಕಮರಿಗೆ ಉರುಳಿದ ಬಸ್: 14 ಮಂದಿ ದುರ್ಮರಣ