ಮನೆ ಸುದ್ದಿ ಜಾಲ ಇಂದು 2.82 ಲಕ್ಷ ಕೊರೊನಾ ಪ್ರಕರಣಗಳು ದೃಢ

ಇಂದು 2.82 ಲಕ್ಷ ಕೊರೊನಾ ಪ್ರಕರಣಗಳು ದೃಢ

0

ನವದೆಹಲಿ:  ದೇಶದಲ್ಲಿ  ಕಳೆದ 24 ಗಂಟೆಗಳಲ್ಲಿ ಹೊಸದಾಗಿ 2,82,970 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ 441 ಮಂದಿ ಕೊರೋನಾದಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,87,202ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 18,31,000 ಕೊವಿಡ್​ 19 ಸಕ್ರಿಯ ಪ್ರಕರಣಗಳು ಇದ್ದು, ಕಳೆದ 232 ದಿನಗಳಲ್ಲಿಯೇ ಇದು ಅತ್ಯಂತ ಹೆಚ್ಚಿನ ಸಂಖ್ಯೆಯ ಸಕ್ರಿಯ ಪ್ರಕರಣ ಎನ್ನಲಾಗಿದೆ.

ಹಾಗೆಯೇ ದೈನಂದಿನ ಪಾಸಿಟಿವಿಟಿ ದರ 15.13ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್​ 15.53ರಷ್ಟಿದೆ. ದೇಶದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 8,961 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹಿಂದಿನ ಲೇಖನಪಾಲಿಕೆ ಅನುಮತಿ ಪಡೆಯದೇ ಆದಿಚುಂಚನಗಿರಿ ಹಿರಿಯ ಶ್ರೀಗಳ ಹೆಸರುಳ್ಳ ಫಲಕ ಅಳವಡಿಕೆ
ಮುಂದಿನ ಲೇಖನಶುಕ್ರವಾರದ ಸಭೆ ನಂತರ ಅಂತಿಮ ನಿರ್ಧಾರ: ಸಚಿವ ಡಾ ಕೆ ಸುಧಾಕರ್