ಜನರಲ್ ಸ್ಯಾಂಟೋಸ್: ಫಿಲಿಪ್ಪಿನ್ಸ್ನಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು, 20,000ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಭೂಕಂಪ ಸಂಭವಿಸಿದ ಮರುದಿನವಾದ ಇಂದು ದಕ್ಷಿಣ ಫಿಲಿಪೈನ್ಸ್‌ನಲ್ಲಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಯಾವುದೇ ಸಿಬ್ಬಂದಿ ಸಿಲುಕಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸಿತು. ಸೋಮವಾರ ಬೆಳಗ್ಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದ ದಕ್ಷಿಣ ಪ್ರಾಂತ್ಯಗಳಲ್ಲಿ ಅಧಿಕೃತ ದಾಖಲೆಗಳಲ್ಲಿ ಕೇವಲ ನಾಲ್ಕು ಜನರು ಕಾಣೆಯಾಗಿದ್ದಾರೆ. ಕುಸಿದ ಮತ್ತು ತೀವ್ರವಾಗಿ ಹಾನಿಗೊಳಗಾದ ಕಟ್ಟಡಗಳನ್ನು ಬದುಕುಳಿದವರು ಅಥವಾ ಸಾವುನೋವುಗಳಿಗಾಗಿ ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದು ನಾಗರಿಕ ರಕ್ಷಣಾ ಸಿಬ್ಬಂದಿ ತಿಳಿಸಿದೆ. ಫಿಲಿಪ್ಪಿನ್ಸ್ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದ್ವೀಪವಾದ ಮಿಂಡಾನಾವೊದಲ್ಲಿ ಭೂಕಂಪ ಕೇಂದ್ರೀಕೃತವಾಗಿದ್ದು, ಸುಮಾರು 500 ಜನರು ಗಾಯಗೊಂಡಿದ್ದಾರೆ. 20,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ತುರ್ತು ಆಶ್ರಯ ತಾಣಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಹಾಗೂ ಅನೇಕ ಜನರು ಸುನಾಮಿಯ ಭಯದಿಂದ ಮನೆಗಳನ್ನೂ ತೊರೆದಿದ್ದಾರೆ. ಫಿಲಿಪ್ಪಿನ್ಸ್ನಲ್ಲಿ ಸುಮಾರು 1.4 ಮೀಟರ್ ಎತ್ತರ ಸಾಗರದ ಅಲೆಗಳು ಕಂಡು ಬಂದಿದ್ದು, ಕರಾವಳಿ ಹಳ್ಳಿಯೊಂದರಲ್ಲಿ ಆರು ಗುಡಿಸಲುಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಇಂಡೋನೇಷ್ಯಾ ಮತ್ತು ಪಲಾವ್‌ನಲ್ಲಿ ಮತ್ತು ದಕ್ಷಿಣ ಜಪಾನ್‌ನಷ್ಟು ದೂರದಲ್ಲಿ ಸಣ್ಣ ಅಲೆಗಳು ತೀರಕ್ಕೆ ಅಪ್ಪಳಿಸಿವೆ. ದೇಶದ ರಾಜಧಾನಿ ಟ್ಯೂನ ಮತ್ತು ಕರಾವಳಿ ನಗರವಾದ ಜನರಲ್ ಸ್ಯಾಂಟೋಸ್ದಲ್ಲಿ ಕಟ್ಟಡಗಳು ಕುಸಿದು ಬಿದ್ದ ಕಾರಣ ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ಸರಂಗೈ ಪ್ರಾಂತ್ಯದಲ್ಲಿ ಅನೇಕ ಕಡೆ ಕಟ್ಟಡ ಮತ್ತು ಭೂ ಕುಸಿತ ಸಂಭವಿಸಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಇತರ ಸಾವಿನ ಪ್ರಕರಣಗಳು ದಕ್ಷಿಣ ಪ್ರಾಂತ್ಯವಾದ ದಕ್ಷಿಣ ಕೊಟಾಬಾಟೊ ಮತ್ತು ದಾವೊ ಆಕ್ಸಿಡೆಂಟಲ್ ಮತ್ತು ಬಲೂಟ್ ದ್ವೀಪದಲ್ಲಿ ಸಂಭವಿಸಿದೆ ಎಂದು ವಿಪತ್ತು ಪ್ರತಿಕ್ರಿಯೆ ಅಧಿಕಾರಿಗಳು ತಿಳಿಸಿದ್ದಾರೆ. ಅನೇಕ ಪ್ರಾಂತ್ಯಗಳಲ್ಲಿ ಸುಮಾರು 2,000 ಮನೆ ಮತ್ತು 117 ಸರ್ಕಾರಿ ಕಟ್ಟಡ ಮತ್ತು ಸೌಲಭ್ಯಗಳು ಹಾನಿಗೊಂಡಿವೆ. ಆರಂಭಿಕ ಹಂತದ ಹಾನಿಯ ಮೌಲ್ಯಮಾಪನವನ್ನು ಸರ್ಕಾರ ಇದೀಗ ನಡೆಸುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಜನರಲ್ ಸ್ಯಾಂಟೋಸ್ ಬಂದ್ ಆಗಿದ್ದು, 63 ದೇಶೀಯ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಸುಮಾರು 6,000 ಸಾರ್ವಜನಿಕ ಶಾಲೆಗಳು ಭೂಕಂಪನಕ್ಕೆ ತುತ್ತಾಗಿದ್ದು, ಬೇಸಿಗೆ ರಜೆ ಬಳಿಕ ಆರಂಭವಾದ ಶಾಲೆಗಳ ಮೊದಲ ದಿನವೇ ಬಂದ್ ಆಗಿವೆ. ಅನೇಕ ವಿದ್ಯಾರ್ಥಿಗಳು ಭೂಕಂಪನದಿಂದಾಗಿ ಗಾಯಗೊಂಡಿದ್ದು, ಶಾಲಾರಂಭದ ಮೊದಲ ದಿನದ ಸಂಭ್ರಮ ಅವರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅನೇಕ ಶಾಲಾ ಕಟ್ಟಡಗಳಲ್ಲಿ ಬಿರುಕು ಬಿಟ್ಟಿದ್ದು, ಅನೇಕ ಶಾಲಾ ಕಟ್ಟಡಗಳು ಕುಸಿತವಾಗಿವೆ. ಈ ಹಿನ್ನಲೆ ಇವುಗಳನ್ನು ತಕ್ಷಣಕ್ಕೆ ತೆರೆಯುವುದಿಲ್ಲ. ಕಟ್ಟಡದ ಸುರಕ್ಷತೆ ಬಳಿಕವೇ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಸಂಭವಿಸಿದ ಭೂಕಂಪವು ಸಾರಂಗನಿ ಪ್ರಾಂತ್ಯದ ಮಾಸಿಮ್ ಪಟ್ಟಣದ ನೈಋತ್ಯಕ್ಕೆ ಸುಮಾರು 32 ಕಿ.ಮೀ ದೂರದಲ್ಲಿ 33 ಕಿ.ಮೀ ಆಳದಲ್ಲಿ ಸಮುದ್ರದಲ್ಲಿ ಕೇಂದ್ರೀಕೃತವಾಗಿತ್ತು. ಕೊಟಾಬಾಟೊ ಕಂದಕದಲ್ಲಿನ ಚಲನೆಯಿಂದ ಇದು ಉಂಟಾಯಿತು 1976ರ ಆಗಸ್ಟ್ 17ರಂದು ಇದೇ ರೀತಿ ಭಾರಿ ಸುನಾಮಿ ಅಲೆ ಎದ್ದ ಪರಿಣಾಮ 8.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಅತ್ಯಂತ ಪ್ರಬಲ ಭೂಕಂಪವಾಗಿತ್ತು ಎಂದು ಫಿಲಿಪ್ಪಿನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೊಲ್ ಹೇಳಿದ್ದಾರೆ. ಹಲವಾರು ಪಟ್ಟಣಗಳು ಮತ್ತು ಪ್ರಾಂತ್ಯಗಳನ್ನು ಆವರಿಸಿದ 8 ರಿಂದ 10 ಮೀಟರ್ ವರೆಗಿನ ಭೂಕಂಪ ಮತ್ತು ಸುನಾಮಿ ಅಲೆಗಳಿಂದ ಸುಮಾರು 8,000 ಜನರು ಸಾವನ್ನಪ್ಪಿದ್ದರು. 1990 ರಲ್ಲಿ 7.8 ರ ತೀವ್ರತೆಯ ಭೂಕಂಪವು 1,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಸಾವಿರಾರು ಜನರು ಗಾಯಗೊಂಡಿದ್ದರು. ಉತ್ತರ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿದ್ದವು. ಫಿಲಿಪ್ಪಿನ್ಸ್ ಪೆಸಿಫಿಕ್ “ರಿಂಗ್ ಆಫ್ ಫೈರ್” ನಲ್ಲಿ ನೆಲೆಗೊಂಡಿರುವುದರಿಂದ, ಅದು ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಗುರಿಯಾಗುತ್ತಿರುತ್ತದೆ. ಈ ದ್ವೀಪಸಮೂಹವು ಪ್ರತಿ ವರ್ಷ ಸುಮಾರು 20 ಟೈಫೂನ್ ಮತ್ತು ಉಷ್ಣವಲಯದ ಬಿರುಗಾಳಿಗಳಿಂದ ಹಾನಿಗೊಳಗಾಗುತ್ತದೆ, ಇದು ವಿಶ್ವದ ಅತ್ಯಂತ ವಿಪತ್ತು ಪೀಡಿತ ದೇಶಗಳಲ್ಲಿ ಒಂದಾಗಿದೆ ಎಂಬುದ್ದಾಗಿದೆ.














