Saval TV on YouTube
ಬೆಂಗಳೂರು(Bengaluru): ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ ಮಾಡಿರುವ ಆರೋಪದಡಿ ವಿವಿಪುರಂ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ದೆಹಲಿಯ ಸೀಮಾಪುರಿಯಲ್ಲಿ ಎಫ್’ಐಆರ್ ದಾಖಲಾಗಿದೆ.
ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್ ಪಾಟೀಲ್ ಎಂಬುವರ ಮೇಲೆ ಎಫ್’ಐಆರ್ ಆಗಿದೆ.
ಪ್ರಕರಣವೊಂದರ ಸಂಬಂಧ ಉದ್ಯಮಿ ಪಂಕಜ್ ಸಿಂಗ್ ಎಂಬುವರಿಗೆ ಆರೋಪಿತ ಮೂವರು ಪೊಲೀಸರು ನೋಟಿಸ್ ಕೊಡಲು ತೆರಳಿದ್ದರು.
ಈ ವೇಳೆ ಪಂಕಜ್ ಸಿಂಗ್’ನಿಂದ ಚೆಕ್ ಹಾಗೂ ನಗದು ರೂಪದಲ್ಲಿ 25 ಲಕ್ಷ ಹಣ ವಸೂಲಿ ಮಾಡಿರುವುದಾಗಿ ಆರೋಪಿಸಿ, ದೆಹಲಿ ಸೀಮಾಪುರಿ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.