ಮನೆ ಅಪರಾಧ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿಟ್ಟಿದ್ದ 27 ಲಕ್ಷ ನಗದು, 308 ಗ್ರಾಂ ಚಿನ್ನಾಭರಣ ಕಳವು

ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿಟ್ಟಿದ್ದ 27 ಲಕ್ಷ ನಗದು, 308 ಗ್ರಾಂ ಚಿನ್ನಾಭರಣ ಕಳವು

0

ಬನ್ನೂರು: ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಟ್ಟಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಚಿನ್ನಾಭರಣ ಕಳುವಾದ ಘಟನೆ ಬನ್ನೂರಿನ ಹೊರಕೇರಿ ವಾರ್ಡ್ ನಲ್ಲಿ ನಡೆದಿದೆ.

Join Our Whatsapp Group

ಗೋವಿಂದ ಎಂಬುವರ ಮನೆಯ ಬೀರು ಬಾಗಿಲು ಮುರಿದಿರುವ ಚಾಲಾಕಿಗಳು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ತಮ್ಮ ಮನೆಗೆ ಹೊಂದಿಕೊಂಡಂತೆ ಮತ್ತೊಂದು ಮನೆಯಲ್ಲಿ ವಾಸ ಮಾಡುತ್ತಿರುವ ತಾಯಿ ಮಗಳು ಕಳ್ಳತನ ಮಾಡಿರುವುದಾಗಿ ಗೋವಿಂದ ರವರು ಆರೋಪಿಸಿ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜೂ 5 ರಂದು ಗೋವಿಂದ ರವರು ತಾವು ಹಾಗೂ ತಮ್ಮ ಸಹೋದರನ ಕುಟುಂಬ ಸಮೇತ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ.

ಜೂನ್ 6 ರಂದು ಹಿಂದಿರುಗಿದಾಗ ಮನೆಯಲ್ಲಿದ್ದ ಲಾಕರ್ ಬೀಗ ಮುರಿದಿದ್ದು ಅದರಲ್ಲಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಒಡವೆಗಳು ನಾಪತ್ತೆಯಾಗಿದೆ.ಅಕ್ಕನ ಮಗನ ಮದುವೆಗೆ ಉಡುಗೊರೆಯಾಗಿ ನಿವೇಶನ ಖರೀದಿಸುವ ಸಲುವಾಗಿ ಗೋವಿಂದ ಹಣವನ್ನ ಹೊಂದಿಸಿ ಇಟ್ಟಿದ್ದರು.ಈ ವಿಚಾರ ಮುಂದಿನ ಮನೆಯಲ್ಲಿದ್ದ ತಾಯಿ ಮಗಳಾದ ಮೀನಾಕ್ಷಮ್ಮ ಹಾಗೂ ರತ್ನ ಇಬ್ಬರಿಗೆ ಮಾತ್ರ ತಿಳಿದಿತ್ತು. ಮನೆಯ ಸದಸ್ಯರಂತೆ ಗೋವಿಂದ ಮನೆಯವರ ಜೊತೆ ಇವರು ಆತ್ಮೀಯವಾಗಿದ್ದರು.

ನಗದು ಮತ್ತು ಒಡವೆಗಳನ್ನ ಮೀನಾಕ್ಷಮ್ಮ ಹಾಗೂ ರತ್ನ ರವರೇ ಕಳುವು ಮಾಡಿದ್ದಾರೆಂದು ಗೋವಿಂದ ಆರೋಪಿಸಿ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಹಿಂದಿನ ಲೇಖನದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದವರಿಗೆ 9 ಹುಲಿಗಳ ದರ್ಶನ
ಮುಂದಿನ ಲೇಖನಇ- ಪತ್ರಿಕೆ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ: ಇಂಡಿಯನ್ ಎಕ್ಸ್‌ ಪ್ರೆಸ್‌ ಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಪರಿಹಾರ