ಮನೆ ಅಂತಾರಾಷ್ಟ್ರೀಯ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆ: ಲಂಡನ್ ತೆರಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆ: ಲಂಡನ್ ತೆರಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು

0

ನವದೆಹಲಿ(Newdelhi): ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಬ್ರಿಟನ್’ಗೆ ತೆರಳಿದ್ದಾರೆ.

ಸೆ. 19 ರಂದು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ 2,000 ವಿಐಪಿ ಅತಿಥಿಗಳ ಸಮ್ಮುಖದಲ್ಲಿ ರಾಣಿಯ ಅಂತ್ಯಕ್ರಿಯೆ ನಡೆಯಲಿದೆ. ಈ ದಿನವನ್ನು ಬ್ರಿಟನ್ ನಲ್ಲಿ ಸಾರ್ವಜನಿಕ ರಜಾ ದಿನವೆಂದು ಘೋಷಿಸಲಾಗಿದೆ.

ಬ್ರಿಟನ್ ನ ದಿವಂಗತ ರಾಣಿ ಎಲಿಜಬೆತ್ ಅವರ ಪಾರ್ಥಿವ ಶರೀರವು ಮಂಗಳವಾರ ಸಂಜೆ ಸ್ಕಾಟ್ಲೆಂಡ್ ನಿಂದ ಲಂಡನ್ ಗೆ ಆಗಮಿಸಿದೆ. ಅವರ ಶವಪೆಟ್ಟಿಗೆಯನ್ನು ಅಂತಿಮ ರಾತ್ರಿ ಬಕಿಂಗ್’ಹ್ಯಾಮ್ ಅರಮನೆಯಲ್ಲಿ ಇರಿಸಲಾಗುವುದು.

ರಾಣಿಯ ಶವಪೆಟ್ಟಿಗೆಯನ್ನು ಬುಧವಾರದಿಂದ ನಾಲ್ಕು ದಿನಗಳ ಕಾಲ ವೆಸ್ಟ್ ಮಿನಿಸ್ಟರ್ ಹಾಲ್ ನಲ್ಲಿ ಇರಿಸಲಾಗಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ. ರಾಣಿ ತನ್ನ 96 ನೇ ವಯಸ್ಸಿನಲ್ಲಿ ಗುರುವಾರ ಬಾಲ್ಮೊರಲ್ ಕೋಟೆಯಲ್ಲಿ ನಿಧನರಾದರು. ಅವರು 70 ವರ್ಷಗಳ ಕಾಲ ಬ್ರಿಟನ್ ಅನ್ನು ಆಳಿದ್ದಾರೆ.

ಹಿಂದಿನ ಲೇಖನ`ಕಬ್ಜ’ ಚಿತ್ರ ಟೀಸರ್ ರಿಲೀಸ್
ಮುಂದಿನ ಲೇಖನದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌: ವೆಂಕಟೇಶ್ ಅಯ್ಯರ್ ತಲೆಗೆ ಬಡಿದ ಚೆಂಡು