ಮನೆ ಅಪರಾಧ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೊಡಿಸುವುದಾಗಿ ವಿದ್ಯಾರ್ಥಿನಿಗೆ 31 ಲಕ್ಷ ರೂ ವಂಚನೆ: ಆರೋಪಿ ಬಂಧನ

ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೊಡಿಸುವುದಾಗಿ ವಿದ್ಯಾರ್ಥಿನಿಗೆ 31 ಲಕ್ಷ ರೂ ವಂಚನೆ: ಆರೋಪಿ ಬಂಧನ

0

ಮಂಡ್ಯ: ಲಿಂಗಾಯತ ಮ್ಯಾಟ್ರಿಮೋನಿಯಲ್ಲಿ ಹಾಕಿದ್ದ ಪ್ರಫೈಲೆ ಡಿಟೇಲ್ಸ್ ತೆಗೆದುಕೊಂಡು ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಕೊಡಿಸುವುದಾಗಿ ವಿದ್ಯಾರ್ಥಿನಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಮಧು ಬಂಧಿತ ಆರೋಪಿ.

ಲಿಂಗಾಯತ್ ಮ್ಯಾಟ್ರಿಮೋನಿ.ಕಾಮ್ ಮೂಲಕ ವೈಯಕ್ತಿಕ ದಾಖಲೆಯನ್ನ ಪಡೆದು ಮಂಡ್ಯ ಜಿಲ್ಲೆ ಮದ್ದೂರು ಮೂಲದ ಬಿದರಕೋಟೆ ಗ್ರಾಮದ ವಿದ್ಯಾರ್ಥಿನಿಗೆ ಪರಿಚಯವಾದ ಮಧು ಆಕೆಗೆ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಕೊಡಿಸುವುದಾಗಿ 31 ಲಕ್ಷದ 34 ಸಾವಿರದ 300 ರೂಪಾಯಿ ವಂಚನೆ ಮಾಡಿದ್ದಾನೆ.

ಈ ಕುರಿತು ಮಂಡ್ಯದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿ ದೂರು ನೀಡಿದ್ದು,  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಬರ್ ಕಳ್ಳ ಮಧುನನ್ನು ಬಂಧಿಸಿದ್ದಾರೆ.

ಮಂಡ್ಯ, ಮೈಸೂರು, ಕೆ.ಆರ್ ನಗರ, ಕಾಟನ್ ಪೇಟೆ, ಹರಿಹರದಲ್ಲಿಯೂ ಕೆಲಸ ಕೊಡಿಸುವುದಾಗಿ ವಂಚಿಸಿರುವ ಕುರಿತು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.

ಹಿಂದಿನ ಲೇಖನಬಿಜೆಪಿ ಬೆಂಬಲಿಸುವ ನಟ ಸುದೀಪ್ ನಿರ್ಧಾರ ಸ್ವಾಗತಿಸಿದ ಮಾಜಿ ಸಿಎಂ ಬಿಎಸ್’ವೈ
ಮುಂದಿನ ಲೇಖನಕಾವೇರಿ, ಕನ್ನಿಕೆಗೆ ಒಳಚರಂಡಿ ನೀರು: ತ್ಯಾಜ್ಯ ಸ್ವಚ್ಛಗೊಳಿಸಲು 15 ದಿನ ಕಾಲಾವಕಾಶ ವಿಸ್ತರಿಸಿದ ಹೈಕೋರ್ಟ್