ಮನೆ ರಾಷ್ಟ್ರೀಯ ಬಿಹಾರದಲ್ಲಿ 4.3 ತೀವ್ರತೆಯ ಭೂಕಂಪ

ಬಿಹಾರದಲ್ಲಿ 4.3 ತೀವ್ರತೆಯ ಭೂಕಂಪ

0

ದೆಹಲಿ: ಬಿಹಾರದ ಅರಾರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

Join Our Whatsapp Group

ಈ ಕುರಿತು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌’ಸಿಎಸ್) ಟ್ವೀಟ್ ಮೂಲಕ ಮಾಹಿತಿ ನೀಡಿದೆ.

 ಬುಧವಾರ ಬೆಳಿಗ್ಗೆ 5.35 ಸುಮಾರಿಗೆ ಕಂಪನ ಸಂಭವಿಸಿದೆ. 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.

ಏಪ್ರಿಲ್ 9ರಂದು ನಿಕೋಬಾರ್ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು.