ಮನೆ ರಾಷ್ಟ್ರೀಯ ಹಳಿ ತಪ್ಪಿದ ಸಾಬರಮತಿ- ಆಗ್ರಾ ಸೂಪರ್‌ ಫಾಸ್ಟ್ ರೈಲಿನ 4 ಬೋಗಿಗಳು: ರೈಲು ಸಂಚಾರದಲ್ಲಿ ವ್ಯತ್ಯಯ

ಹಳಿ ತಪ್ಪಿದ ಸಾಬರಮತಿ- ಆಗ್ರಾ ಸೂಪರ್‌ ಫಾಸ್ಟ್ ರೈಲಿನ 4 ಬೋಗಿಗಳು: ರೈಲು ಸಂಚಾರದಲ್ಲಿ ವ್ಯತ್ಯಯ

0

ರಾಜಸ್ಥಾನ: ಭಾನುವಾರ ತಡರಾತ್ರಿ ರಾಜಸ್ಥಾನದ ಅಜ್ಮೀರ್‌ ನ ಮದರ್ ರೈಲು ನಿಲ್ದಾಣದ ಬಳಿ ಸೂಪರ್‌ ಫಾಸ್ಟ್ ರೈಲಿನ ಕನಿಷ್ಠ ನಾಲ್ಕು ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದೆ.

ಘಟನೆಯ ಕುರಿತು ಮಾತನಾಡಿದ ವಾಯುವ್ಯ ರೈಲ್ವೇಯ ಸಿಪಿಆರ್‌ ಒ ಶಶಿ ಕಿರಣ್, “ಸಾಬರಮತಿಯಿಂದ ಆಗ್ರಾಕ್ಕೆ ಹೋಗುತ್ತಿದ್ದ ರೈಲು ಸಂಖ್ಯೆ 12548 ಅಜ್ಮೀರ್‌ನ ಮದರ್‌ನಲ್ಲಿರುವ ಹೋಮ್ ಸಿಗ್ನಲ್ ಬಳಿ ರೈಲಿನ ನಾಲ್ಕು ಬೋಗಿಗಳು ಮತ್ತು ರೈಲಿನ ಇಂಜಿನ್ ಹಳಿತಪ್ಪಿದೆ ಅಪಘಾತದಿಂದ ಕೆಲವು ಮಂದಿಗೆ ಸಣ್ಣಪುಟ್ಟ ಗಾಯಗಳಲಿವೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು ಬೋಗಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯ ಸಮಯದಲ್ಲಿ ಹಲವಾರು ಪ್ರಯಾಣಿಕರು ರೈಲಿನಲ್ಲಿದ್ದರು ಎಂದು ವರದಿಯಾಗಿದೆ. ರೈಲ್ವೆ ಅಧಿಕಾರಿಗಳು ಅಜ್ಮೀರ್ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಅನ್ನು ಸ್ಥಾಪಿಸಿದ್ದಾರೆ ಮತ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 0145-2429642 ಅನ್ನು ಒದಗಿಸಿದ್ದಾರೆ.

ರೈಲು ಅವಘಡದಿಂದಾಗಿ ಈ ಮಾರ್ಗವಾಗಿ ಪ್ರಯಾಣಿಸಬೇಕಿದ್ದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಸಿಬಂದಿಗಳು ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ರೈಲು ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು ಎಂದು ಹೇಳಿದ್ದಾರೆ.

ಹಿಂದಿನ ಲೇಖನಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ
ಮುಂದಿನ ಲೇಖನ2-3 ದಿನಗಳಲ್ಲಿ ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ