ಮನೆ ರಾಜ್ಯ ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಿ: ನಿಂಗರಾಜು

ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಿ: ನಿಂಗರಾಜು

0

ಮೈಸೂರು(Mysuru): ಗ್ರಾಮೀಣ ಭಾಗದ ಮಹಿಳೆಯರು ಮನೆ, ಜಮೀನು ಹಾಗೂ ಕೂಲಿ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆ ಒತ್ತು ನೀಡದೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಮಹಿಳೆಯರು ಹೆಚ್ಚು ಆರೋಗ್ಯದ ಕಡೆ ಗಮನಹರಿಸಬೇಕು ಎಂದು ತಾಲ್ಲೂಕು ಮಾಹಿತಿ ಶಿಕ್ಷಣ ಸಂಯೋಜಕ ನಿಂಗರಾಜು ಹೇಳಿದರು.

ತಾಲ್ಲೂಕಿನ ತುಂಬಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬಸೋಗೆ ಗ್ರಾಮದಲ್ಲಿ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿ ಕೈಗೊಂಡಿರುವ ಸಾತನಕಟ್ಟೆ ಕೆರೆ ಕಾಮಗಾರಿ ಆವರಣದಲ್ಲಿ ಮಂಗಳವಾರ ಮಹಾತ್ಮಗಾಂಧಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನದಡಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಮಹಿಳೆಯರು ಆರೋಗ್ಯದಿಂದ ಇದ್ದರೆ ಇಡೀ ಕುಟುಂಬ ಉತ್ತಮವಾಗಿ ನೋಡಿಕೊಳ್ಳಬಹುದು. ಅದಕ್ಕಾಗಿಯೇ ನರೇಗಾ ಯೋಜನೆಯಡಿ ಉಚಿತ ತಪಾಸಣೆ ನಡೆಸುವ ಮೂಲಕ ಆರೋಗ್ಯ ಸಮಸ್ಯೆ ಗುರುತಿಸಿ ಹೆಚ್ಚಿನ ಚಿಕಿತ್ಸೆಗೆ ರೆಫರ್ ಮಾಡಲಾಗುತ್ತಿದೆ. ನರೇಗಾ ಕೂಲಿ ಕಾರ್ಮಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ಕಾಲಕಾಲಕ್ಕೆ ಸ್ಥಳೀಯ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.

ರಕ್ತದ ಒತ್ತಡ, ಸಕ್ಕರೆ ಖಾಯಿಲೆ, ಹಿಮೋಗ್ಲೋಬಿನ್ ಹಾಗೂ ತೂಕ ಪರೀಕ್ಷೆಗಳನ್ನು ಮಾಡಲಾಯಿತು. ೭೮ ಮಹಿಳೆಯರು ಹಾಗೂ ೧೦ ಪುರುಷರು ಸೇರಿದಂತೆ ಒಟ್ಟು ೮೮ ಮಂದಿಗೆ ತಪಾಸಣೆ ಮಾಡಲಾಗಿದ್ದು, ಅದರಲ್ಲಿ ೧೩ ಜನರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಕಾವ್ಯ, ಪಿಡಿಒ ಮಧುರ, ಕಾರ್ಯದರ್ಶಿ ಆದಮ್ ಅಲಿ ಜಾಲಗೇರಿ, ಆರೋಗ್ಯ ಅಮೃತ ಅಭಿಯಾನ ಸಂಯೋಜಕ ರಾಘವೇಂದ್ರ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಾನಸ, ಮಂಜುಳ, ಸಂಜೀವಿನ ಒಕ್ಕೂಟದ ಎಂ.ಬಿ.ಕೆ ದೇವಮಣಿ, ಎಲ್.ಸಿ.ಆರ್.ಪಿ ಆಶಾ ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.

ಹಿಂದಿನ ಲೇಖನಮೈಸೂರು: ಜಿಲ್ಲಾ ಆಸ್ಪತ್ರೆಗೆ  ಜಿಲ್ಲಾಧಿಕಾರಿಗಳ  ದಿಢೀರ್‌ ಭೇಟಿ, ಪರಿಶೀಲನೆ
ಮುಂದಿನ ಲೇಖನಸಂಕಟನಾಶನ ಶ್ರೀ ಗಣಪತೀ ಸ್ತೋತ್ರ