ಮನೆ ಸುದ್ದಿ ಜಾಲ ಭಾರೀ ಹಿಮಪಾತ: 42 ಮಂದಿ ಸಾವು, 118 ಜನರಿಗೆ ಗಾಯ

ಭಾರೀ ಹಿಮಪಾತ: 42 ಮಂದಿ ಸಾವು, 118 ಜನರಿಗೆ ಗಾಯ

0

ಕಾಬೂಲ್: ಅಫ್ಘಾನಿಸ್ತಾನದ 15 ಪ್ರಾಂತ್ಯದಲ್ಲಿ ಕಳೆದ 20 ದಿನಗಳಿಂದ ಬೀಳುತ್ತಿರುವ ಭಾರೀ ಹಿಮಪಾತದಿಂದಾಗಿ ಕನಿಷ್ಠ 42 ಜನರು ಸಾವನ್ನಪ್ಪಿದ್ದು, 118 ಜನರು ಗಾಯಗೊಂಡಿದ್ದಾರೆ. 2,000ಕ್ಕೂ ಹೆಚ್ಚು ಮನೆಗಳು ಸಹ ನಾಶವಾಗಿವೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ಜನರಿಗೆ ತುರ್ತು ನೆರವು ನೀಡಲಾಗುತ್ತಿದೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ಭಾರೀ ಹಿಮಪಾತದಿಂದಾಗಿ ಹಲವಾರು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದ ನೂರಾರು ಜನರನ್ನು ರಕ್ಷಿಸಲಾಗಿದೆ ಮತ್ತು ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ. ಸಂತ್ರಸ್ತರಿಗೆ ತುರ್ತು ನೆರವನ್ನು ತಲುಪಿಸಲು ವಿವಿಧ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಸಚಿವಾಲಯದ ಅಧಿಕಾರಿ ಇನಾಯತುಲ್ಲಾ ಶುಜಾ ಹೇಳಿದ್ದಾರೆ.

 ರಕ್ತ ಹೆಪ್ಪುಗಟ್ಟುವ ಚಳಿಗಾಲ ಮತ್ತು ಭಾರೀ ಹಿಮಪಾತವು ಅಫ್ಗಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ವಿಶ್ವಸಂಸ್ಥೆಯ ಅಂಕಿಅಂಶಗಳ ಆಧಾರದ ಮೇಲೆ, ಅಫ್ಗಾನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅಂದರೆ 2.4 ಕೋಟಿಗೂ ಹೆಚ್ಚು ಜನರಿಗೆ ಜೀವ ಉಳಿಸಿಕೊಳ್ಳಲು ಸಹಾಯದ ಅಗತ್ಯವಿದೆ.

ಹಿಂದಿನ ಲೇಖನ19 ಐಎಎಸ್ ಅಧಿಕಾರಿಗಳ ವರ್ಗ
ಮುಂದಿನ ಲೇಖನನಿರ್ಮಲ ಸೀತರಾಮನ್ ಅವರ ನಾಲ್ಕನೇ ಬಜೆಟ್ ಮಂಡನೆಗೆ ಒಂದು ವಾರ ಬಾಕಿ: ಇಲ್ಲಿದೆ ಮಾಹಿತಿ