ಮನೆ ರಾಜಕೀಯ ನಿರ್ಮಲ ಸೀತರಾಮನ್ ಅವರ ನಾಲ್ಕನೇ ಬಜೆಟ್ ಮಂಡನೆಗೆ ಒಂದು ವಾರ ಬಾಕಿ: ಇಲ್ಲಿದೆ ಮಾಹಿತಿ

ನಿರ್ಮಲ ಸೀತರಾಮನ್ ಅವರ ನಾಲ್ಕನೇ ಬಜೆಟ್ ಮಂಡನೆಗೆ ಒಂದು ವಾರ ಬಾಕಿ: ಇಲ್ಲಿದೆ ಮಾಹಿತಿ

0

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಲಿರುವ ನಾಲ್ಕನೇ ಬಜೆಟ್ ಗೆ ಇಡೀ ದೇಶ ಕಾಯುತ್ತಿದೆ. ಬಜೆಟ್ ಮಂಡನೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಫೆಬ್ರವರಿ 1, 2022 ರಂದು ಸೀತರಾಮನ್ ದೇಶದ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ.

2022 ರ ಬಜೆಟ್ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರ್ಕಾರದ 10 ನೇ ಬಜೆಟ್ ಆಗಿದ್ದರೆ, 2019 ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ನಿರ್ಮಲಾ ಸೀತಾರಾಮನ್ ಅವರ ನಾಲ್ಕನೇ ಮಂಡನೆಯಾಗಿದೆ.

ಈ ವರ್ಷವೂ ಕೂಡ ಸರ್ಕಾರವು ಆರ್ಥಿಕತೆಯನ್ನು ಬಲಪಡಿಸಲು ಮತ್ತು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸಲು ಹಲವು ಪ್ರಮುಖ ಘೋಷಣೆಗಳನ್ನು ಮಾಡಬಹುದು. ಆದರೆ ಕೋವಿಡ್​-ಮತ್ತು ಓಮೈಕ್ರಾನ್ಆತಂಕ ಹೆಚ್ಚಾಗಿರುವುದರಿಂದ ಆರ್ಥಿಕ ಚೇತರಿಕೆ ಬಗ್ಗೆ ಕಳವಳ ಸೃಷ್ಟಿಯಾಗಿದೆ

ಜನವರಿ 31 ರಂದು ಆರ್ಥಿಕ ಸಮೀಕ್ಷೆ: ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 31 ರಂದು ಕೇಂದ್ರ ಸರ್ಕಾರವು ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಿದೆ. ಹಣಕಾಸು ಸಚಿವಾಲಯದ ಪ್ರಮುಖ ವಾರ್ಷಿಕ ದಾಖಲೆಯಾದ ಆರ್ಥಿಕ ಸಮೀಕ್ಷೆಯು ಕಳೆದ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯನ್ನು ಪರಿಶೀಲಿಸುತ್ತದೆ. ಇದು ಎಲ್ಲಾ ವಲಯಗಳ ಡೇಟಾದ ಸಂಪೂರ್ಣ ವಿವರಗಳನ್ನು ನೀಡುತ್ತದೆ.

ಎರಡು ಹಂತಗಳಲ್ಲಿ ಸಂಸತ್ತಿನ ಬಜೆಟ್ ಅಧಿವೇಶನ: ಭಾರತದ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವ ದಿನಾಂಕದಂದು ಸಂಸತ್ತಿನ ಬಜೆಟ್ ಅಧಿವೇಶನವೂ ಪ್ರಾರಂಭವಾಗುತ್ತದೆ. ಜನವರಿ 31 ರಂದು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ. ಮೊದಲ ಹಂತದ ಅಧಿವೇಶನ ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯಲಿದೆ. ಅದರ ನಂತರ, ಎರಡನೇ ಅಧಿವೇಶನದ ಸಮಿತಿಯು ಮಾರ್ಚ್ 14 ರಂದು ಮರುಜೋಡಣೆಯಾಗಲಿದೆ ಮತ್ತು ಏಪ್ರಿಲ್ 8 ರವರೆಗೆ ಇರುತ್ತದೆ.

ಭರವಸೆಯ ಮಹಾಪೂರ

ಪ್ರತಿ ಬಾರಿಯಂತೆ ಈ ಬಾರಿಯೂ 2022ರ ಬಜೆಟ್‌ನಿಂದ ದೇಶದ ಸಾಮಾನ್ಯ ಜನರು ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳು ನಿರೀಕ್ಷೆಗಳನ್ನಿ ಇಟ್ಟುಕೊಂಡಿದೆ. ಸಂಬಳ ಪಡೆಯವ ವರ್ಗ, ಉದ್ಯಮದಾರರು, ತಜ್ಞರು ಹಲವು ನಿರೀಕ್ಷೆಗಳೊಂದಿಗೆ ನೋಡುತ್ತಿದ್ದಾರೆ.

ಬಜೆಟ್ ಕುರಿತ ಇನ್ನಿತರ ಪ್ರಮುಖ ವಿಷಯಗಳು
* ದೇಶದ ಸಾಮಾನ್ಯ ಬಜೆಟ್ ಅನ್ನು ಹಣಕಾಸು ಸಚಿವಾಲಯವು ಇತರ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸುತ್ತದೆ.
* 2017 ರವರೆಗೆ ರೈಲ್ವೆ ಬಜೆಟ್ ಅನ್ನು ಬಜೆಟ್‌ನಿಂದ ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಈಗ ಸಾಮಾನ್ಯ ಬಜೆಟ್ ನಲ್ಲಿ ವಿಲೀನಗೊಳಿಸಲಾಗಿದೆ.
* 2017 ರಿಂದ ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲು ಪ್ರಾರಂಭಿಸಲಾಯ್ತು. ಈ ಮೊದಲು ಫೆಬ್ರವರಿ ಅಂತ್ಯದಲ್ಲಿ ಬಜೆಟ್ ಮಂಡನೆ ಆಗುತ್ತಿತ್ತು.
* ಬಜೆಟ್ ಭಾಷಣದ ಸರಾಸರಿ ಮಂಡನೆ ಸಮಯವು 90 ನಿಮಿಷಗಳಿಂದ 120 ನಿಮಿಷಗಳವರೆಗೆ ಇರುತ್ತದೆ.
* ನಿರ್ಮಲಾ ಸೀತಾರಾಮನ್ 2021-22 ರಲ್ಲಿ 160 ನಿಮಿಷಗಳ ಕಾಲ ಸುದೀರ್ಘ ಬಜೆಟ್ ಭಾಷಣವನ್ನು ನೀಡಿದ್ದರು.
* ಸೀತಾರಾಮನ್‌ಗಿಂತ ಮೊದಲು, ಜಸ್ವಂತ್ ಸಿಂಗ್ ಅವರು 135 ನಿಮಿಷಗಳಲ್ಲಿ 2003 ರಲ್ಲಿ ಸುದೀರ್ಘ ಬಜೆಟ್ ಭಾಷಣ ಮಾಡಿದ್ದರು.
* 1977 ರಲ್ಲಿ ಹಿರೂಭಾಯಿ ಎಂ ಪಟೇಲ್ ಅವರು 800 ಪದಗಳಲ್ಲಿ ಬಜೆಟ್ ಸಲ್ಲಿಸಿದ್ದರು.

ಬಜೆಟ್​​ನಲ್ಲಿ ಅಬಕಾರಿ ಸುಂಕ, ಕಸ್ಟಮ್ಸ್ ಸುಂಕ, ಆಮದು ಸುಂಕ, ಯಾವುದೇ ವಸ್ತುವಿನ ಮೇಲಿನ ಸೆಸ್ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಚಿಂತನೆಯಲ್ಲಿ ಸರ್ಕಾರ ಇದ್ದರೆ ಅದನ್ನು ಘೋಷಿಸಬಹುದು. ಇದರ ನೇರ ಪರಿಣಾಮ ಹಣದುಬ್ಬರದ ಮೇಲೆ ಬೀರುತ್ತದೆ. ಹಣದುಬ್ಬರ ಕಡಿಮೆಯಾಗುವುದು ಅಥವಾ ಅಧಿಕವಾಗುತ್ತದೆ.
ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲಿನ ಹೆಚ್ಚಿನ ಸುಂಕಗಳಿಂದಾಗಿ ಗ್ರಾಹಕರು ಹೆಚ್ಚಿನ ಬೆಲೆಗಳನ್ನು ಪಾವತಿಸಬೇಕಾಗಬಹುದು. ಅದೇ ಸಮಯದಲ್ಲಿ ಸುಂಕದ ಕಡಿತವು ಉತ್ಪನ್ನವನ್ನು ಅಗ್ಗವಾಗಿಸುತ್ತದೆ. ಹೆಚ್ಚುವರಿಯಾಗಿ, ಬಜೆಟ್ ಯಾವುದೇ ಹೊಸ ಸೆಸ್ ವಿಧಿಸುವುದನ್ನು ಅಥವಾ ಹಳೆಯದಕ್ಕಿಂತ ದರಗಳ ಬದಲಾವಣೆಯನ್ನು ಘೋಷಿಸಬಹುದು. ಇದು ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ.

ಹಿಂದಿನ ಲೇಖನಭಾರೀ ಹಿಮಪಾತ: 42 ಮಂದಿ ಸಾವು, 118 ಜನರಿಗೆ ಗಾಯ
ಮುಂದಿನ ಲೇಖನದಾವಣಗೆರೆ: ವೃದ್ಧ ದಂಪತಿಗಳ ಕೊಲೆ