ಮನೆ ಸುದ್ದಿ ಜಾಲ ರಾಜ್ಯದ ಐವರಿಗೆ ಪದ್ಮ ಶ್ರೀ ಪದ್ಮಶ್ರೀ,  ಬಿಪಿನ್ ರಾವತ್ ಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ

ರಾಜ್ಯದ ಐವರಿಗೆ ಪದ್ಮ ಶ್ರೀ ಪದ್ಮಶ್ರೀ,  ಬಿಪಿನ್ ರಾವತ್ ಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ

0

ನವದೆಹಲಿ: ದಲಿತ ಕವಿ ದಿವಂಗತ ಸಿದ್ದಲಿಂಗಯ್ಯ ಸೇರಿದಂತೆ ರಾಜ್ಯದ ಒಟ್ಟು ಐವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಗಣರಾಜ್ಯೋತ್ಸವದ ಮುನ್ನಾ ದಿನ ಸಂಪ್ರದಾಯದಂತೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, 2022ರ ಈ ಪಟ್ಟಿಯಲ್ಲಿ ರಾಜ್ಯದ ಒಟ್ಟು ಐವರು ಸ್ಥಾನ ಪಡೆದಿದ್ದಾರೆ.

ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ದಿವಂಗತ ಸಿದ್ದಲಿಂಗಯ್ಯನವರು ಸಲ್ಲಿಸಿದ ಅಪೂರ್ವ ಸೇವೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಮರಣೋತ್ತರವಾಗಿ ಪದ್ಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಾಧಕ ಅಮೈ ಮಹಾಲಿಂಗ ನಾಯ್ಕ, ಧಾರವಾಡ ಜಿಲ್ಲೆ ಅಣ್ಣೀಗೇರಿಯ ಅಬ್ದುಲ್ ಖಾದರ್ ನಡಕಟ್ಟೀನ್ ಅವರನ್ನು ಕೃಷಿ ಆವಿಷ್ಕಾರ ಕ್ಷೇತ್ರದಲ್ಲಿ ಗುರ್ತಿಸಿ ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ. ಕಲಾ ರಂಗದಿಂದ ಎಚ್. ಆರ್. ಕೇಶವ ಮೂರ್ತಿ ಅವರನ್ನು ಪದ್ಮ ಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ವಿಜ್ಞಾನ ಹಾಗೂ ಎಂಜಿನಿಯರಿಂಗ್ ರಂಗಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಸ್ಮರಿಸಿ ಸುಬ್ಬಣ್ಣ ಅಯ್ಯಪ್ಪನ್ ಅವರನ್ನೂ ಪದ್ಮ ಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಈ ಬಾರಿ ರಾಜ್ಯದ ಐವರು ಗಣ್ಯರು ಪದ್ಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.


ಇತ್ತೀಚೆಗಷ್ಟೇ ಅಪಘಾತದಲ್ಲಿ ನಿಧನರಾದ ಜನರಲ್ ಬಿಪಿನ್ ರಾವತ್ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ  ಪುರಸ್ಕಾರ ನೀಡಲು ಕೇಂದ್ರ ತೀರ್ಮಾನಿಸಿದೆ. ರಾಜಕೀಯ ವ್ಯವಹಾರಗಳ ವಿಭಾಗದಲ್ಲಿ ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಮರಣೋತ್ತರವಾಗಿ ಪದ್ಮ ವಿಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಇನ್ನು ಜಮ್ಮು ಕಾಶ್ಮೀರದ ರಾಜಕಾರಣಿ ಗುಲಾಂ ನಬಿ ಆಜಾದ್, ಅಮೆರಿಕ ನಿವಾಸಿಗಳಾದ ಮೈಕ್ರೋ ಸಾಫ್ಟ್‌ ಸಿಇಒ ಸತ್ಯ ನಾರಾಯಣ ನಡೆಲ್ಲಾ ಹಾಗೂ ಗೂಗಲ್‌ನ ಸುಂದರ್ ಪಿಚಯ್, ಹಿಂದಿ, ಕನ್ನಡ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರ್ತಿಸಿಕೊಂಡಿರುವ ಸೋನು ನಿಗಂ ಅವರಿಗೂ ಪದ್ಮ ಭೂಷಣ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಹಿಂದಿನ ಲೇಖನ73ನೇ ಗಣರಾಜ್ಯೋತ್ಸವದ ಪರೇಡ್’ಗೆ ಕ್ಷಣಗಣನೆ:ಹೆಚ್ಚಿದ ಭದ್ರತೆ
ಮುಂದಿನ ಲೇಖನಪದ್ಮ ಭೂಷಣ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ