ಮನೆ ರಾಜ್ಯ ವಿಧಾನಪರಿಷತ್‌ ನ 7 ಸ್ಥಾನಗಳಿಗೆ ಜೂನ್‌ 3 ರಂದು ಚುನಾವಣೆ

ವಿಧಾನಪರಿಷತ್‌ ನ 7 ಸ್ಥಾನಗಳಿಗೆ ಜೂನ್‌ 3 ರಂದು ಚುನಾವಣೆ

0

ಬೆಂಗಳೂರು(Bengaluru)- ವಿಧಾನಪರಿಷತ್‌ 7 ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಜೂನ್ 3 ರಂದು ಮತದಾನ ನಡೆಯಲಿದೆ.

ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ ಘೋಷಿಸಿದ್ದು, ಜೂನ್ 3 ರಂದು ಮತದಾನ ನಡೆಯಲಿದೆ. ಮೇ 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ವಿಧಾನಸಭೆ ಸದಸ್ಯರಿಂದ ಆಯ್ಕೆಯಾದ ವಿಧಾನಪರಿಷತ್‌ ನ ಏಳು ಮಂದಿ ಸದಸ್ಯರ ಅವಧಿ ಜೂನ್ 14 ಕ್ಕೆ ಮುಕ್ತಾಯಗೊಳ್ಳಲಿದೆ. ಸದಸ್ಯರಾದ ಲಕ್ಷ್ಮಣ ಸವದಿ, ರಾಮಪ್ಪ ತಿಮ್ಮಾಪುರ್‌, ಅಲ್ಲಮ್ ವೀರಭದ್ರಪ್ಪ, ಎಚ್‌.ಎಂ.ರಮೇಶ್ ಗೌಡ, ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣ ಸ್ವಾಮಿ, ಲೆಹರ್‌ ಸಿಂಗ್ ಸೇರಿದಂತೆ ಏಳು ಮಂದಿ ಸದಸ್ಯರ ಅವಧಿ ಮುಕ್ತಾಗೊಳ್ಳಲಿದೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮೇ 24, ನಾಮಪತ್ರ ಪರಿಶೀಲನೆ ಕೊನೆಯ ದಿನ ಮೇ 25, ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ ಮೇ 27, ಮತದಾನ ನಡೆಯುವ ದಿನಾಂಕ ಜೂನ್ 3, ಮತದಾನ ನಡೆಯುವ ಅವಧಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ, ಮತ ಎಣಿಕೆ ದಿನ ಜೂನ್ 3 ಸಂಜೆ ಐದು ಗಂಟೆಯ ಬಳಿಕ
ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ ಜೂನ್ 7.

ಚುನಾವಣೆ ಘೋಷಣೆ ಆಗಿರುವುದರಿಂದ ಈ ಏಳು ಸ್ಥಾನಕ್ಕೆ ಮೂರು ಪಕ್ಷಗಳು ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಿದೆ ಎಂಬುದು ಇನ್ನೂ ಅಧಿಕೃತಗೊಂಡಿಲ್ಲ. ಈಗಾಗಲೇ ಅಭ್ಯರ್ಥಿ ಆಯ್ಕೆ ಕಸರತ್ತುಗಳು ನಡೆಯುತ್ತಿವೆ. ಹಲವು ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ.

ಹಿಂದಿನ ಲೇಖನಡಿಜಿಪಿ ಹುದ್ದೆಗೆ ಡಾ.ಪಿ.ರವೀಂದ್ರನಾಥ್‌ ರಾಜೀನಾಮೆ
ಮುಂದಿನ ಲೇಖನಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸುಪ್ರೀಂ ತೀರ್ಪು: ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ