ಮನೆ ಸುದ್ದಿ ಜಾಲ 73ನೇ ಗಣರಾಜ್ಯೋತ್ಸವ: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

73ನೇ ಗಣರಾಜ್ಯೋತ್ಸವ: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

0

ನವದೆಹಲಿ: ದೇಶದಾದ್ಯಂತ 73 ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, “ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್! ಎಂದು ಹೇಳಿದ್ದಾರೆ. 

ದೇಶದ ಕಲೆ, ಸಂಸ್ಕೃತಿ, ಸೇನಾ ಸಾಮರ್ಥ್ಯವನ್ನು ದೇಶ ಮತ್ತು ಜಗತ್ತಿನ ಮುಂದೆ ತೆರೆದಿಡುವ 73ನೇ ಗಣರಾಜ್ಯೋತ್ಸವಕ್ಕೆ ದೆಹಲಿಯ ರಾಜಪಥ ಸಜ್ಜಾಗಿದೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವಾದ ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ರಾಜಪಥದಲ್ಲಿನ ಗಣರಾಜ್ಯೋತ್ಸವ  ಪಥಸಂಚಲನಕ್ಕೆ ಇಂಡಿಯಾ 75 ಥೀಮ್ ನೀಡಲಾಗಿದೆ. 

ಕೊರೋನಾ ಕಾರಣ ತಪಾಸಣೆ ಮತ್ತು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವ ಹಿನ್ನೆಲೆಯಲ್ಲಿ ರಾಜಪಥದ ಪಥ ಸಂಚಲನ 10.30ಕ್ಕೆ ಆರಂಭವಾಗಲಿದೆ. 

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವುದರೊಂದಿಗೆ ಗಣರಾಜ್ಯೋತ್ಸವ ಪರೇಡ್ ಸಮಾರಂಭ ಆರಂಭವಾಗಲಿದೆ.