ಮನೆ ಅಪರಾಧ 8 ಸಾವಿರ ಲಂಚ ಸ್ವೀಕಾರ: ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ

8 ಸಾವಿರ ಲಂಚ ಸ್ವೀಕಾರ: ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ

0

ಚಿಕ್ಕಬಳ್ಳಾಪುರ: 8000 ರೂ. ಲಂಚ ಪಡೆಯುವಾಗ ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಾಲಾ ಕಿರಣ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ.

ಶಿಡ್ಲಘಟ್ಟ ರಸ್ತೆಯಲ್ಲಿರುವ ಬಸವೇಶ್ವರ ಫ್ಯೂಯಲ್ ಸೆಂಟರ್’ನಲ್ಲಿ ಪೆಟ್ರೋಲ್ ಬಂಕ್ ಮೀಟರ್ ನವೀಕರಣಕ್ಕೆ 8000 ರೂ. ಲಂಚಕ್ಕೆ ಮಾಲೀಕ ಜಯಸೂರ್ಯ ಬಳಿ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚ ಪಡೆಯುವಾಗ ಸೆರೆ ಹಿಡಿದು, ಬಂಧಿತ ಅಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾಲಾ ಕಿರಣ್’ಗೆ ಸೇರಿದ ಬೆಂಗಳೂರಿನ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ದೊರಕಿದ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಎಸ್’ಪಿ ಪವನ್ ನೆಜ್ಜೂರು ತಿಳಿಸಿದ್ದಾರೆ.

ಹಿಂದಿನ ಲೇಖನಕೆಟ್ಟ ಕೇಶ ವಿನ್ಯಾಸ: ಎನ್’ಸಿಡಿಆರ್’ಸಿ ಆದೇಶಿಸಿದ್ದ ₹2 ಕೋಟಿ ಪರಿಹಾರ ರದ್ದು; ಹೊಸದಾಗಿ ಪರಿಗಣಿಸಲು ಸುಪ್ರೀಂ ಸೂಚನೆ
ಮುಂದಿನ ಲೇಖನ7ನೇ ವೇತನ ಆಯೋಗ: ರಾಜ್ಯ ಸರ್ಕಾರಿ ನೌಕರರಿಗೆ ಮಾರ್ಗಸೂಚಿ ಪ್ರಕಟ