1. ಚರ್ಮರೋಗದಲ್ಲಿ :ಇಸಬು , ಸೊರಿಯಾಸಿಸ್ ಮುಂತಾದವುಗಳಿಂದ ಬಳಲುವವರು ಎರಡು ಚಮಚೆ ಒಂದೆಲಗದ ರಸ ತೆಗೆದು ದಿನಕ್ಕೆರಡು ಬಾರಿ ಕುಡಿಯಬೇಕು.
2. ಗಾಯಗಳಾಗಿದ್ದಲ್ಲಿ: ಮತ್ತು ವ್ರಣಗಳಾಗಿದ್ದಲ್ಲಿ ಒಂದಲಗವನ್ನು ಅರೆದು ಲೇಪಿಸುವುದರಿಂದ ವಾಸಿಯಾಗುತ್ತದೆ.
3. ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುವವರಿಗೆ ಒಂದೆಲಗದ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.ಇಲ್ಲವೇ ಒಂದೆಲಗದ ಕಷಾಯ ತಯಾರಿಸಿ ಕುಡಿಯಬೇಕು.
4. ತೊನ್ನು: ರೋಗದಿಂದ ಬಳಲುವವರು ಒಂದೆಲಗದ ರಸ ಇಲ್ಲವೇ ಕಷಾಯ ಸೇವೆನೆ ಮಾಡುವುದರಿಂದ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
5. ನಿಶ್ಯಕ್ತಿಯಿಂದ ಬಳಲುವವರು: ಒಂದೆಲಗದ ರಸವನ್ನು ಜೇನುತುಪ್ಪ ಇಲ್ಲವೇ ಹಾಲು, ಸಕ್ಕರೆಯೊಂದಿಗೆ ಬೆರೆಸಿ ಕುಡಿಯುವುದರಿಂದ ಸಶಕ್ತತೆ ಉಂಟಾಗುತ್ತದೆ.
6. ಮಲಬದ್ಧತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವನೆ ಮಾಡುವುದರಿಂದ ಮಲ ವಿಸರ್ಜನೆ ಸಲೀಸಾಗಿ ಆಗುತ್ತದೆ.ಇದರಲ್ಲಿ ಸೆಲ್ಯುಲೋಸ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆಗಾಗ ಇದನ್ನು ಸೇವನೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆ ಅಷ್ಟಾಗಿ ಬಾಧಿಸುವುದಿಲ್ಲ.
7. ಪ್ರಸವ ವೇದನೆಯಿಂದ ಬಳಲುವ: ಸ್ತ್ರೀಯರಿಗೆ ಒಂದೆಲಗದ ಕಷಾಯ ಕುಡಿಸುವುದರಿಂದ ಹೆರಿಗೆ ಸುಲಭವಾಗಿರುತ್ತದೆ.
8. ರೋಗನಿರೋಧಕ ಶಕ್ತಿ ಶಿಶುಗಳಿಗೆ: ಒಂದೆಲಗದ ರಸವನ್ನು ಆರ್ಧದಿಂದ ಒಂದು ಚಮಚೆಯಷ್ಪುನ್ನು ಜೇನಿನೊಂದಿಗೆ ಬೆರೆಸಿ ಕುಡಿಸುವುದರಿಂದ ಕಾಯಿಲೆಗಳು ಕಾಡುವುದಿಲ್ಲ.ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
9. ನಿದ್ರಾ ಹೀನತೆಯಿಂದ ಬಳಲುವವರು: ಒಂದೆಲಗದ ರಸವನ್ನು ಬೆಳಿಗ್ಗೆ ಹಾಗೂ ರಾತ್ರಿ ಎರಡರಿಂದ ನಾಲ್ಕು ಚಮಚೆಯಷ್ಟನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.ಅಲ್ಲದೇ ಒಂದೆಲಗದ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ತೈಲ ತಯಾರಿಸಿಟ್ಟುಕೊಂಡು ಆ ತೈಲವನ್ನು ಪ್ರತಿದಿನ ರಾತ್ರಿ ಮಲಗುವ ಮುಂಚೆ ನೆತ್ತಿಗೆ ಲೇಪಿಸಬೇಕು.
10. ಜ್ಞಾಪಕಶಕ್ತಿಯ ಹೆಚ್ಚಳ :ಒಂದೆಲಗದ ಇಡೀ ಸಸ್ಯವನ್ನು ಜಜ್ಜಿ ಹಾಲಿನಲ್ಲಿ ಕುದಿಸಿ ಕ್ಷೀರಪಾಕ ತಯಾರಿಸಬೇಕು.ಒಂದು ಬಟ್ಟಲು ಕ್ಷೀರಪಾಕವನ್ನು ರಾತ್ರಿ ಮಲಗುವ ಮುಂಚೆ ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
11. ಬುದ್ಧಿಮಾಂಧ್ಯ ಮಕ್ಕಳಿಗೆ ಪ್ರತಿದಿನ: ಒಂದೆಲಗದ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸಬೇಕು. ಇಲ್ಲವೇ ಪಲ್ಯ ಚಟ್ನಿ,ಸಾಲಾಡ್ ರೂಪದಲ್ಲಿ ಆಹಾರದಲ್ಲಿ ತಿನ್ನಿಸಬೇಕು .
12. ಜ್ವರ ಬಂತು ನೆಗಡಿಯಲ್ಲಿ: ಒಂದೆಲಗ, ತುಳಸಿ, ಕಾಳು, ಮೆಣಸು ಸಮಭಾಗ ತೆಗೆದುಕೊಂಡು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು.